ರಕ್ಷಿತ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ರಿಷಬ್ ಶೆಟ್ಟಿ; 'He Will Be Back Soon' ಎಂದ ನಟ
ರಕ್ಷಿತ್ ಜೊತೆಗಿನ ಫೋಟೋವನ್ನು ಹಂಚಿಕೊಂಡು "ಹಾದುಹೋಗುವ ಮುಖಗಳ ನಡುವೆ ಶಾಶ್ವತ ಅಧ್ಯಾಯನಾದ ಸ್ನೇಹಿತ" ಎಂದು ಹೇಳಿರುವ ಅವರು, ಹುಟ್ಟುಹಬ್ಬದ ಶುಭಾಶಯಗಳು ಮಗಾ.

ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು, ತಮ್ಮ ಆಪ್ತ ಸ್ನೇಹಿತ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಶೆಟ್ಟಿ ಅವರು, ರಕ್ಷಿತ್ ಜೊತೆಗಿನ ಫೋಟೋವನ್ನು ಹಂಚಿಕೊಂಡು "ಹಾದುಹೋಗುವ ಮುಖಗಳ ನಡುವೆ ಶಾಶ್ವತ ಅಧ್ಯಾಯನಾದ ಸ್ನೇಹಿತ" ಎಂದು ಹೇಳಿರುವ ಅವರು, ಹುಟ್ಟುಹಬ್ಬದ ಶುಭಾಶಯಗಳು ಮಗಾ ಎಂದು ಹೇಳಿದ್ದಾರೆ.
ಇದೇ ವೇಳೆ ಮೊನ್ನೆ ತಾನೆ ಮೀಟ್ ಮಾಡ್ಕೊಂಡು ಬಂದೆ ಎಂದು ಹೇಳಿರುವ ಅವರು, ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ಕುತೂಹಲವನ್ನು ಸೃಷ್ಟಿಸಿದೆ.
ಕೆಲ ತಿಂಗಳುಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ರಕ್ಷಿತ್ ಶೆಟ್ಟಿ ಶೀಘ್ರದಲ್ಲೇ ಹೊಸ ಸಿನಿಮಾ ಅಥವಾ ಮಹತ್ವದ ಘೋಷಣೆಯೊಂದಿಗೆ ಅಭಿಮಾನಿಗಳ ಮುಂದೆ ಬರಲಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.
ರಿಷಬ್ ಮತ್ತು ರಕ್ಷಿತ್ ಅವರ ಸ್ನೇಹ ಹಲವು ವರ್ಷಗಳ ಹಿಂದಿನಿಂದಲೂ ಇದ್ದು, ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಸ್ನೇಹಿತ ಜೋಡಿಗಳಲ್ಲಿ ಒಂದಾಗಿದೆ.
ಇಬ್ಬರೂ ಸೇರಿ ರಿಕ್ಕಿ, ಕಿರಿಕ್ ಪಾರ್ಟಿ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ಕನ್ನಡ ಸಿನಿರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ವಿಶೇಷವಾಗಿ ಕಿರಿಕ್ ಪಾರ್ಟಿ ಚಿತ್ರದ ಯಶಸ್ಸು ಇವರಿಬ್ಬರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತ್ತು.
ಇತ್ತೀಚಿನ ವರ್ಷಗಳಲ್ಲಿ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದರೆ, ರಕ್ಷಿತ್ ಶೆಟ್ಟಿ ತಮ್ಮ ಕನಸಿನ ಯೋಜನೆಗಳಾದ ರಿಚರ್ಡ್ ಆಂಥೋನಿ ಸೇರಿದಂತೆ ಹಲವು ಚಿತ್ರಗಳ ಕೆಲಸದಲ್ಲಿ ನಿರತರಾಗಿದ್ದಾರೆ.
ಇದೇ ಕಾರಣಕ್ಕೆ ರಿಷಬ್ ಅವರ “He Will Be Back Soon” ಎಂಬ ಮಾತು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


