ಸಿನಿಮಾ ಸುದ್ದಿ

ಟಾಕ್ಸಿಕ್: Cryptic ಪೋಸ್ಟ್, ನೆಕ್ಸ್ಟ್ ಹಾಡಿನ ಬಗ್ಗೆ ಹಿಂಟ್ ಕೊಟ್ಟ ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ!

ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ ಅವರ "Toxic - PBS 4" ಎಂಬ ನಿಗೂಢ ಪೋಸ್ಟ್, ಚಿತ್ರದ ಮುಂದಿನ ಹಾಡಿನ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

ಟಾಕ್ಸಿಕ್: Cryptic ಪೋಸ್ಟ್, ನೆಕ್ಸ್ಟ್ ಹಾಡಿನ ಬಗ್ಗೆ ಹಿಂಟ್ ಕೊಟ್ಟ ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ!
ಟಾಕ್ಸಿಕ್ ನಲ್ಲಿ ಯಶ್
Published On :

ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ 'ಟಾಕ್ಸಿಕ್ ' ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮುಂದುವರೆದಿದೆ. ಆದರೆ ಈ ಬಾರಿ ಟೀಸರ್ ಅಥವಾ ಪೋಸ್ಟರ್ ನಿಂದಲ್ಲ. ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ ಕ್ರಿಪಿಟಿಕ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೊಸ ಹಾಡಿನ ಸುಳಿವು ನೀಡಿದ್ದಾರೆ. ಗ್ಯಾಂಗ್‌ಸ್ಟರ್ ಆಕ್ಷನ್ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಬರಬಹುದು ಎಂಬ ಸುಳಿವು ಸಿಕ್ಕಿದೆ.

'ತಬಾಹಿ' (Tabaahi) ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಸಂಗೀತ ಸಂಯೋಜಕ ವಿಶಾಲ್ ಮಿಶ್ರಾ ಅವರ "Toxic - PBS 4" ಎಂಬ ನಿಗೂಢ ಪೋಸ್ಟ್, ಚಿತ್ರದ ಮುಂದಿನ ಹಾಡಿನ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. 'ತಬಾಹಿ' ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಈ ಹೊಸ ಚರ್ಚೆ ಶುರುವಾಗಿದೆ.

ಇದೀಗ, "Toxic - PBS 4" ಎಂಬ ಶೀರ್ಷಿಕೆಯೊಂದಿಗೆ ಮಿಶ್ರಾ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಸಂಗೀತ ಕಾರ್ಯಕ್ರಮವೊಂದಕ್ಕಾಗಿ ಸದ್ಯ ಕ್ಯಾಲಿಫೋರ್ನಿಯಾದಲ್ಲಿರುವ ಮಿಶ್ರಾ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ, ಚಿತ್ರದ ನಾಲ್ಕನೇ ಹಾಡಿನ ಕೆಲಸ ಭರದಿಂದ ಸಾಗುತ್ತಿದೆ ಎಂಬುದನ್ನು ಈ ಪೋಸ್ಟ್ ಪರೋಕ್ಷವಾಗಿ ಸೂಚಿಸುತ್ತಿದೆ ಎಂಬುದು ಅನೇಕರ ನಂಬಿಕೆಯಾಗಿದೆ.

'ಟಾಕ್ಸಿಕ್' (Toxic) ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಸಂಗೀತವು ಒಂದಾಗಿದೆ. ವಿಶಾಲ್ ಮಿಶ್ರಾ, ರವಿ ಬಸ್ರೂರು, ತನಿಷ್ಕ್ ಬಾಗ್ಚಿ ಮತ್ತು ಫಹೀಮ್ ಅಬ್ದುಲ್ಲಾ ಅವರಂತಹ ಪ್ರತಿಭಾವಂತ ಸಂಗೀತ ಸಂಯೋಜಕರ ತಂಡವು ಈ ಚಿತ್ರದ ಸಂಗೀತವನ್ನು ಸಂಯೋಜಿಸುತ್ತಿದೆ. ಕನ್ನಡದ ರವಿ ಬಸ್ರೂರು ಅವರು ಚಿತ್ರದ ಹಿನ್ನೆಲೆ ಸಂಗೀತವನ್ನೂ (background score) ಸಂಯೋಜಿಸುತ್ತಿದ್ದಾರೆ. ಮಿಶ್ರಾ ಈಗಾಗಲೇ ಈ ಚಿತ್ರಕ್ಕಾಗಿ 'ತಬಾಹಿ' (Tabaahi)ಸೇರಿದಂತೆ ಇತರ ಮೂರು ಹಾಡುಗಳನ್ನು ನೀಡಿದ್ದಾರೆ. ಹಾಗೆಯೇ ಮತ್ತೊಂದು ಹಾಡನ್ನು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಅವರ ಸಹಯೋಗದಲ್ಲಿ ರಚಿಸಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ, ಯಶ್ ಅವರು 'ರಾಯ್' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಅಕ್ಷಯ್ ಒಬೆರಾಯ್, ಸುದೇವ್ ನಾಯರ್, ಅಮಿತ್ ತಿವಾರಿ ಮತ್ತಿತರ ಹಲವು ಹಾಲಿವುಡ್ ನಟರು ಅಭಿನಯಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರವು, ಆಗಸ್ಟ್ 26, 2026 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕಾಗಿ ಹಲವು ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.