ಗೆಳೆಯ ವೈಶಾಖ್ ಆತ್ಮಹತ್ಯೆ: ದುಃಖದ ಜೊತೆಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ; ಕೃಷಿ ತಾಪಂಡ ಪೋಸ್ಟ್ ವೈರಲ್
ತಾವು ವಾಸವಿದ್ದ ಅಪಾರ್ಟ್ಮೆಂಟ್ನ ಬೆಡ್ ರೂಮ್ ನಲ್ಲೇ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ನಂತರ ನಟಿಯ ವಿರುದ್ಧ ಹಲವು ರೀತಿಯ ಊಹಾಪೋಹಗಳು ಕೇಳಿಬಂದಿದ್ದವು.

ಬೆಂಗಳೂರು: ತಮ್ಮ ಆತ್ಮೀಯ ಗೆಳೆಯ ಹಾಗೂ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ನಂತರ ಮತ್ತೆ ಮೌನ ಮುರಿದ ನಟಿ ಹಾಗೂ ಬಿಗ್ಬಾಸ್ನ ಮಾಜಿ ಸ್ಪರ್ಧಿ ಕೃಷಿ ತಾಪಂಡ ಅವರು, ದುಃಖದ ಜೊತೆಗೆ ಬದುಕುವುದನ್ನು ಕಲಿಯುತ್ತಿದ್ದೇನೆ, ಬೇರೆ ದಾರಿಯೇ ಇಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ತಾವು ವಾಸವಿದ್ದ ಅಪಾರ್ಟ್ಮೆಂಟ್ನ ಬೆಡ್ ರೂಮ್ ನಲ್ಲೇ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ನಂತರ ನಟಿಯ ವಿರುದ್ಧ ಹಲವು ರೀತಿಯ ಊಹಾಪೋಹಗಳು ಕೇಳಿಬಂದಿದ್ದವು.
ಈ ಎಲ್ಲ ಬೆಳವಣಿಗೆಗಳ ಬಳಿಕ ನಟಿ ಕೃಷಿ ತಾಪಂಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು, ನಿಮ್ಮ ವದಂತಿಗಳನ್ನು ನಿಲ್ಲಿಸಿ. ನನಗೆ ಬದುಕಲು ಬಿಡಿ ಎಂದು ಕೇಳಿಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಮೂಲಕ ಮೌನ ಮುರಿದಿದ್ದಾರೆ.
ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ..ಬೇರೆ ದಾರಿಯೇ ಇಲ್ಲದ ಕಾರಣ ಎಂದು ಬರೆದುಕೊಂಡು ಇತ್ತೀಚೆಗೆ ಅವರು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಫಾಲೋವರ್ಸ್ಗಳು ಧೈರ್ಯ ತುಂಬಿದ್ದಾರೆ.
ಐದಾರು ಫೋಟೋ ಹಂಚಿಕೊಂಡಿರುವ ನಟಿ ಕೃಷಿ ತಾಪಂಡ ಅವರು ಮೊದಲ ಫೋಟೋದಲ್ಲಿ ಯಾವುದೋ ಕಲ್ಲಿನ ಮೇಲೆ ಆಲೋಚಿಸುತ್ತ ಕುಳಿತ ಫೋಟೋಗೆ ಅಪೂರ್ಣ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದರಲ್ಲಿ ಪ್ರಕೃತಿ, ಮಳೆ, ಶ್ವಾನ ನಿದ್ರಿಸುತ್ತಿರುವುದು, ಪಕ್ಷಿಗಳ ಓಡಾಟ, ಗಿಡಕ್ಕೆ ನೀರುಣಿಸುವಾಗ ಆಳವಾಗಿ ಚಿಂತಿಸುತ್ತಿರುವ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಇನ್ನು ಒಳ್ಳೆ ಕಾಲ ಬಂದೇ ಬರುತ್ತೆ ನೀವು ಅದಕ್ಕಾಗಿ ಕಾಯಬೇಕಷ್ಟೇ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಗಟ್ಟಿಯಾಗಿ ನಿಲ್ಲಿ ಎಂದಿದ್ದಾರೆ. ಸಮಯ ಎಲ್ಲವನ್ನೂ ಮರೆಸುತ್ತೆ. ಕತ್ತಲು ಕಳೆದ ಮೇಲೆ ಬೆಳಕು ಬಂದೆ ಬರುತ್ತೆ. ನೀವು ನಾನು ನೋಡಿದ ಬಲಿಷ್ಠ ಮಹಿಳೆ ಎಂದು ಅಭಿಮಾನಿಗಳು ಸಾಂತ್ವನ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



