ಸಿನಿಮಾ ಸುದ್ದಿ

BiggBoss Kannada 12: ಮನೆಗೆ ಮಲ್ಲಮ್ಮ ರೀ ಎಂಟ್ರಿ; ಮೊದಲಿನಂತೆ ಕ್ಲೋಸ್ ಇಲ್ಲ ಎಂದ ಧ್ರುವಂತ್

ಬಿಗ್ ಬಾಸ್ ಮನೆಗೆ ಮಲ್ಲಮ್ಮ ರೀಎಂಟ್ರಿ ಕೊಟ್ಟಿದ್ದು, ಮನೆ ಮಂದಿಯೆಲ್ಲಾ ಫುಲ್ ಖುಷ್​ ಆಗಿದ್ದಾರೆ. ಸಂಭ್ರಮದಿಂದ ಮಲ್ಲಮ್ಮನನ್ನ ಬರ ಮಾಡಿಕೊಂಡಿದ್ದಾರೆ.

BiggBoss Kannada 12: ಮನೆಗೆ ಮಲ್ಲಮ್ಮ ರೀ ಎಂಟ್ರಿ; ಮೊದಲಿನಂತೆ ಕ್ಲೋಸ್ ಇಲ್ಲ ಎಂದ ಧ್ರುವಂತ್
ಮಲ್ಲಮ್ಮ
Published On :

ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 12 ಕೊನೆ ಹಂತ ತಲುಪಿದ್ದು, ಈ ನಡುವಲ್ಲೇ ಎಲಿಮಿನೇಟ್ ಆಗಿ ಹೊರ ಹೋಗಿದ್ದ ಮಲ್ಲಮ್ಮ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಟ್ವಿಸ್ಟ್ ಕಂಡು ಪ್ರೇಕ್ಷಕರು ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಮನೆಗೆ ಮಲ್ಲಮ್ಮ ರೀಎಂಟ್ರಿ ಕೊಟ್ಟಿದ್ದು, ಮನೆ ಮಂದಿಯೆಲ್ಲಾ ಫುಲ್ ಖುಷ್​ ಆಗಿದ್ದಾರೆ. ಸಂಭ್ರಮದಿಂದ ಮಲ್ಲಮ್ಮನನ್ನ ಬರ ಮಾಡಿಕೊಂಡಿದ್ದಾರೆ.

ಮಲ್ಲಮ್ಮ ಬರ್ತಿದ್ದಂತೆ ಗಿಲ್ಲಿಯ ಕಾಲು ಎಳೆದಿದ್ದಾರೆ. ಏನ್ ಗಿಲ್ಲಿ ಮಾತೇ ಆಡ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಗಿಲ್ಲಿ ಕೂಡ ಏನ್ ಬ್ಯೂಟಿಪುಲ್ ಆಗಿದ್ಯಾ? ಹೊರಗೆ ಫುಲ್ ಫ್ಯಾನ್ಸಾ ಎಂದು ಕಾಮಿಡಿ ಮಾಡಿದ್ದಾರೆ. ಹೌದೌದು ಹೊರಗೆ ನನ್ನದೇ ಹವಾ ಎನ್ನುತ್ತಲೇ ಮಲ್ಲಮ್ಮ ಗಿಲ್ಲಿಗೆ ಕೌಂಟರ್ ಕೊಟ್ಟಿದ್ದಾರೆ.

ಈ ನಡುವೆ ಮಲ್ಲಮ್ಮ ಅವರೊಂದಿಗೆ ಮಾತನಾಡಿದ ಬಳಿಕ, ಅಶ್ವಿನಿ ಗೌಡ ಅವರೊಂದಿಗೆ ಮಾತನಾಡಿರುವ ಧ್ರುವಂತ್ ಮೊದಲಿನಂತೆ ಕ್ಲೋಸ್​​ನೆಸ್ ಈಗ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಮಲ್ಲಮ್ಮ ಅವರು ಧ್ರುವಂತ್​ ಜೊತೆ ಹೆಚ್ಚು ಆತ್ಮೀಯರಾಗಿದ್ದರು. ಆದರೆ, ರೀ ಎಂಟ್ರಿ ವೇಳೆ ಆ ಆತ್ಮೀಯತೆ ಕಾಣುತ್ತಿಲ್ಲ ಎಂದು ಧ್ರುವಂತ್-ಅಶ್ವಿನಿ ಬಳಿ ಹೇಳಿದ್ದಾರೆ.

ಮಲ್ಲಮ್ಮ ಬರ್ತಿದ್ದಂತೆ ಧ್ರುವಂತ್ ಫುಲ್ ಖುಷ್ ಆದರು. ಕೂಡಲೇ ಆಕೆಯನ್ನ ಎತ್ತಿಕೊಂಡು ಸಂಭ್ರಮಿಸಿದರು. ಬಳಿಕ ಮಲ್ಲಮ್ಮನ ಬಳಿ ಮಾತಾಡಲು ಹೋಗಿದ್ದಾರೆ. ಆದರೆ, ಮಲ್ಲಮ್ಮ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಧ್ರುವಂತ್​-ಅಶ್ವಿನಿ ಬಳಿ ಅಸಮಾಧಾನ ಹೊರಹಾಕಿದ್ದಾರೆ.

ಮಲ್ಲಮ್ಮ ಸರಿಯಾಗಿ ಮಾತಾಡುತ್ತಿಲ್ಲ. ಮೊದಲಿನ ಆತ್ಮೀಯತೆ ಈಗ ಕಾಣುತ್ತಿಲ್ಲಲ್ಲ. ಎಲ್ಲೋ ಜರ್ಕ್ ಕಾಣಿಸುತ್ತಿದೆ ಎಂದು ಧ್ರುವಂತ್ ಹೇಳಿಕೊಂಡಿದ್ದಾರೆ. ಇದಕ್ಕೆ ಅಶ್ವಿನಿ ಹೌದು ಹೌದು, ಇರಲಿ ಇಲ್ಲಿ ನನಗೆ ನೀನು-ನಿನಗೆ ನಾನು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.