ಎರಡು ಭಿನ್ನ ಸಂಸ್ಕೃತಿಯಂತೆ ನಡೆಯಲಿದೆ ರಶ್ಮಿಕಾ-ವಿಜಯ್ ವಿವಾಹ: ಭರ್ಜರಿಯಾಗಿ ನೆರವೇರಿದ ಸಂಗೀತ್ ಕಾರ್ಯಕ್ರಮ
ಉದಯಪುರದಲ್ಲಿರುವ ವಿವಾಹ ಸ್ಥಳದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ದಕ್ಷಿಣ ಭಾರತ ಚಿತ್ರರಂಗದ ಈ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ವಿವಾಹವಾಗಲಿದ್ದಾರೆ.

ಇಂದು ಫೆಬ್ರವರಿ 26ರಂದು ನಡೆಯಲಿರುವ “ದಿ ಬಿಗ್ ಫ್ಯಾಟ್ ಸೌತ್ ಇಂಡಿಯನ್ ವೆಡ್ಡಿಂಗ್” ಅನೇಕ ಕಾರಣಗಳಿಂದ ವಿಶೇಷವಾಗಲಿದೆ. ಉದಯಪುರದಲ್ಲಿರುವ ವಿವಾಹ ಸ್ಥಳದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ದಕ್ಷಿಣ ಭಾರತ ಚಿತ್ರರಂಗದ ಈ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ವಿವಾಹವಾಗಲಿದ್ದಾರೆ.
ಮೊದಲ ವಿವಾಹವು ತೆಲುಗು ಸಂಪ್ರದಾಯದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಮುಹೂರ್ತ ನೆರವೇರಲಿದೆ. ಎರಡನೇ ಸಮಾರಂಭವು ಕರ್ನಾಟಕದ ಕೊಡಗು ಜಿಲ್ಲೆಯ ವಿಶೇಷ ಸಂಪ್ರದಾಯವಾದ ಕೊಡವ ಪರಂಪರೆಯಲ್ಲಿ ನಡೆಯಲಿದೆ ಎಂದು ಉದಯಪುರದಲ್ಲಿರುವ ಅತಿಥಿಯೊಬ್ಬರು ತಿಳಿಸಿದ್ದಾರೆ.

ಎರಡು ಸಂಪ್ರದಾಯಗಳಲ್ಲಿ ವಿವಾಹ ನಡೆಸುವ ಆಲೋಚನೆ ವಿಜಯ್ ದೇವರಕೊಂಡ ಅವರದ್ದಾಗಿದ್ದು, ತಮ್ಮ ತಮ್ಮ ಸಂಸ್ಕೃತಿ ಮತ್ತು ಸಮುದಾಯಗಳನ್ನು ಗೌರವಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ವಿವಾಹ ವಿಧಿಗಳನ್ನು ನೆರವೇರಿಸಲು ಹೈದರಾಬಾದ್‌ನಿಂದ ಪಂಡಿತರು ಉದಯಪುರಕ್ಕೆ ಆಗಮಿಸಿದ್ದಾರೆ.
ನಿನ್ನೆ ಸಾಯಂಕಾಲ ಉದಯಪುರದಲ್ಲಿ ಸಂಗೀತ್ ಕಾರ್ಯಕ್ರಮ ನೆರವೇರಿದ್ದು, ಅದರ ಫೋಟೋ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಜಯ್-ರಶ್ಮಿಕಾರ ಹಿಟ್ ಸಾಂಗ್ ಸಂಗೀತ್ ಕಾರ್ಯಕ್ರಮದಲ್ಲಿ ಪ್ರಸಾರ
ವಿಜಯ್-ರಶ್ಮಿಕಾ ಜೋಡಿ ತಮ್ಮ 2017ರ ಸೂಪರ್‌ಹಿಟ್ ಚಿತ್ರ Geetha Govindam ನ ಜನಪ್ರಿಯ ಹಾಡು ಯೆಂಟಿ ಯೆಂಟಿಯನ್ನು ಸಂಗೀತ ಕಾರ್ಯಕ್ರಮದಲ್ಲಿ ಪ್ಲೇ ಮಾಡಲಾಗಿತ್ತು. ಇದೇ ಚಿತ್ರವು ಇವರನ್ನು ಮೊದಲ ಬಾರಿ ಒಂದಾಗಿಸಿತು.
ಈ ಜೋಡಿಯ ಎವರ್ ಗ್ರೀನ್ ಹಾಡಾದ 'ಯೇಂಟಿ ಯೇಂಟಿ' ಅನ್ನು ಸಂಗೀತ ಸಮಾರಂಭದಲ್ಲಿ ಮರುಸೃಷ್ಟಿಸಲಿದ್ದಾರೆ. ವೈರಲ್ ಆದ 12 ಸೆಕೆಂಡ್ಗಳ ಅಸ್ಪಷ್ಟ ವಿಡಿಯೋದಲ್ಲಿ, ಸಮಾರಂಭ ನಡೆಯುವ ಸ್ಥಳವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿದೆ. ವಿಶೇಷವೆಂದರೆ, ಇಡೀ ಸ್ಥಳವನ್ನು ದಂಪತಿಯ ಹಲವಾರು ಅಪರೂಪದ ಛಾಯಾಚಿತ್ರಗಳಿಂದ ರಚಿಸಿದ್ದಾರೆ.
ಇದು ಅವರಿಬ್ಬರ ಭೇಟಿಯಿಂದ ಪ್ರಾರಂಭವಾಗಿ ತೆರೆಯ ಮೇಲೆ 'ಗೀತಾ ಗೋವಿಂದಂ' ಆಗಿ ಮಿಂಚಿದ ಕ್ಷಣಗಳು ಮತ್ತು ಇತ್ತೀಚಿನ ಖಾಸಗಿ ಪ್ರವಾಸಗಳ ಫೋಟೋಗಳನ್ನು ಫ್ರೇಮ್‌ಗಳಲ್ಲಿ ಜೋಡಿಸಲಾಗಿದೆ. ಪ್ರತಿಯೊಂದು ಫೋಟೋಗಳೂ ಕೂಡ ಅವರಿಬ್ಬರ ಪ್ರೀತಿಯನ್ನು ವಿವರಿಸುತ್ತಿದೆ ಎಂದು ಅಲ್ಲಿರುವ ಅತಿಥಿಗಳು ಅಭಿಪ್ರಾಯ ಪಟ್ಟಿದ್ದಾರೆ.

ವಿಜಯ್ ಮತ್ತು ರಶ್ಮಿಕಾ ಖಾಸಗಿ ವಿವಾಹದ ಕನಸಿಟ್ಟಿದ್ದರೂ, ಸಂಭ್ರಮದ ಝಲಕ್ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಸ್ಥಳದ ಹೊರಗೆ ಕೂಡಿದ್ದಾರೆ. ಅವರಿಗಾಗಿ ದಂಪತಿ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಅವರು 2017ರಲ್ಲಿ ಗೀತ ಗೋವಿಂದಮ್ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿ ಭೇಟಿಯಾದರು. ಆ ಚಿತ್ರವು ಭರ್ಜರಿ ಯಶಸ್ಸು ಕಂಡಿತು. ಎರಡು ವರ್ಷಗಳ ನಂತರ ಅವರು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಮತ್ತೆ ಜೊತೆಯಾಗಿ ನಟಿಸಿದರು. ಬಳಿಕ ನಿಜ ಜೀವನದಲ್ಲಿ ಜೋಡಿ ಹತ್ತಿರವಾಗಿ ಒಬ್ಬರಿಗೊಬ್ಬರು ಪ್ರೀತಿಸಲು ಆರಂಭಿಸಿದರು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



