ಸಿನಿಮಾ ಸುದ್ದಿ

ಆ ಒಂದು ಕಾರಣಕ್ಕೆ ಅಷ್ಟೊಂದು ಕೋಟಿ ಆಫರ್ ತಿರಸ್ಕರಿಸಿದ್ರಾ ರಶ್ಮಿಕಾ-ವಿಜಯ್ ಜೋಡಿ: ಏನದು?

ಈ ತಿಂಗಳಾಂತ್ಯಕ್ಕೆ ರಾಜಸ್ಥಾನದಲ್ಲಿ ಜೋಡಿ ಅದ್ದೂರಿಯಾಗಿ ವಿವಾಹವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಆ ಒಂದು ಕಾರಣಕ್ಕೆ ಅಷ್ಟೊಂದು ಕೋಟಿ ಆಫರ್ ತಿರಸ್ಕರಿಸಿದ್ರಾ ರಶ್ಮಿಕಾ-ವಿಜಯ್ ಜೋಡಿ: ಏನದು?
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
Published On :

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಕುರಿತು ಸಾಕಷ್ಟು ಸುದ್ದಿಗಳು ಕಳೆದ ಒಂದು ತಿಂಗಳಿನಿಂದ ಹರಿದಾಡುತ್ತಿದೆ. ಈ ತಿಂಗಳಾಂತ್ಯಕ್ಕೆ ರಾಜಸ್ಥಾನದಲ್ಲಿ ಜೋಡಿ ಅದ್ದೂರಿಯಾಗಿ ವಿವಾಹವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇವರ ಮದುವೆ ವಿಡಿಯೋ ಹಕ್ಕುಗಳನ್ನು ಖರೀದಿಸಲು ಪ್ರಮುಖ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಸುಮಾರು 60 ಕೋಟಿ ರೂಪಾಯಿ ಮೊತ್ತದ ಆಫರ್ ನೀಡಿದೆ ಎನ್ನಲಾಗಿದೆ. ಆದರೆ ಆಫರ್ ನ್ನು ತಿರಸ್ಕರಿಸಿದ್ದು, ತಮ್ಮ ಮದುವೆಯ ನೆನಪುಗಳು ಅಮೂಲ್ಯವಾಗಿದ್ದು ಅವನ್ನು ಖಾಸಗಿಯಾಗಿ ಉಳಿಸಿಕೊಳ್ಳಲು ಇಬ್ಬರೂ ಬಯಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಮದುವೆಯನ್ನು ಕೇವಲ ಆಪ್ತ ಕುಟುಂಬ ಸದಸ್ಯರ ನಡುವೆ ಸರಳ ಹಾಗೂ ಖಾಸಗಿ ಕಾರ್ಯಕ್ರಮವಾಗಿ ನಡೆಸಿಕೊಳ್ಳಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

ನೆಟ್‌ಫ್ಲಿಕ್ಸ್ ಈ ಹಿಂದೆ ನಟಿ ನಯನತಾರಾ ಅವರ ಮದುವೆ ಹಕ್ಕುಗಳನ್ನು ಸುಮಾರು 25 ಕೋಟಿ ರೂಪಾಯಿಗೆ ಖರೀದಿಸಿತ್ತು. ಆ ನಂತರ ಸಾಕಷ್ಟು ಕಾನೂನು ತೊಡಕುಗಳು ಉಂಟಾಗಿತ್ತು. ನಯನತಾರಾ–ಧನುಷ್ ವಿವಾದದ ನಂತರ, ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಫೆ.26ಕ್ಕೆ ಮದುವೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ತಿಲ್ಲ. ಅನೇಕ ಬಾರಿ ಪರೋಕ್ಷವಾಗಿ ಪ್ರೀತಿ ವಿಷ್ಯ ಹಂಚಿಕೊಂಡ್ರೂ, ರಶ್ಮಿಕಾ ಪ್ರೀತಿಸ್ತಿರೋ ಹುಡುಗನ ಹೆಸರು ಹೇಳಿಲ್ಲ. ಎಂಗೇಜ್ಮೆಂಟ್ ಗುಟ್ಟನ್ನೂ ಜೋಡಿ ಈವರೆಗೆ ಬಿಟ್ಟುಕೊಟ್ಟಿಲ್ಲ. ಅವರ ಕೈನಲ್ಲಿರುವ ಉಂಗುರ ನೋಡಿ ಅಭಿಮಾನಿಗಳು ಎಂಗೇಜ್ಮೆಂಟ್ ಆಗಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.