ರಿಯಲ್ ಸ್ಟಾರ್ ಉಪೇಂದ್ರ ಪುತ್ರ 'ಆಯುಷ್' ಲಾಂಚ್ ಮಾಡಲು ವೇದಿಕೆ ಸಿದ್ಧ: ಕಾಶ್ಮೀರದಲ್ಲಿ ಚಿತ್ರೀಕರಣ ಆರಂಭ
ಕಳೆದ 10 ದಿನಗಳಿಂದ ಪ್ಲಾನ್ ಪ್ರಕಾರ ಶೂಟಿಂಗ್ ನಡೆಯುತ್ತಿದೆ, ಫೆಬ್ರವರಿ 18 ರವರೆಗೆ ತಂಡವು ಕಾಶ್ಮೀರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ

ಆಯುಷ್ ಉಪೇಂದ್ರ ತಮ್ಮ ಮೊದಲ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. 'ಮೊದಲ ಸಲ' ಖ್ಯಾತಿಯ ಪುರುಷೋತ್ತಮ ಸಿ ಸೋಮನಾಥಪುರ ನಿರ್ದೇಶಿಸಿ ಅಭಿಷೇಕ್ ಸಿರಿವಂತ ನಿರ್ಮಿಸಿದ್ದಾರೆ.
ಇನ್ನೂ ಹೆಸರಿಡದ ಈ ಸಿನಿಮಾಗೆ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ, ಕಾಶ್ಮೀರದಲ್ಲಿ ಚಿತ್ರ ತಂಡವು ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದೆ.
ಚಿತ್ರದ ಮೊದಲ ವೇಳಾಪಟ್ಟಿ ಕಣಿವೆಯಲ್ಲಿ ನಡೆಯುತ್ತಿದೆ, ಕೊರೆವ ಚಳಿಯ ನಡುವೆಯೂ ಚಿತ್ರೀಕರಣ ನಡೆಸುತ್ತಿದೆ. ಕಠಿಣ ಹವಾಮಾನದ ಹೊರತಾಗಿಯೂ, ಕಳೆದ 10 ದಿನಗಳಿಂದ ಪ್ಲಾನ್ ಪ್ರಕಾರ ಶೂಟಿಂಗ್ ನಡೆಯುತ್ತಿದೆ, ಫೆಬ್ರವರಿ 18 ರವರೆಗೆ ತಂಡವು ಕಾಶ್ಮೀರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ನಂತರ ಮುಂದಿನ ಶೂಟಿಂಗ್ ಗಾಗಿ ಮೈಸೂರಿಗೆ ಸ್ಥಳಾಂತರಗೊಳ್ಳಲಿದೆ. ಎಚ್‌ಸಿ ವೇಣು ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಬಹಳಷ್ಟು ಕಾಳಜಿಯಿಂದ ತೊಡಗಿಸಿಕೊಂಡಿದ್ದಾರೆ. ಆಯುಷ್ ಸಿನಿಮಾ ಎಂಟ್ರಿಗಾಗಿ ಬಹಳಷ್ಟು ಸಿದ್ದತೆ ಮಾಡಿಕೊಂಡಿದ್ದಾರೆ. ಅವರು ಸೆಟ್‌ಗಳಲ್ಲಿ ಹಾಜರಿದ್ದು ತಮ್ಮ ಮಗನ ಮೊದಲ ಶೂಟಿಂಗ್ ಗೆ ಮಾರ್ಗದರ್ಶನ ನೀಡಿದ್ದಾರೆ.
ವಿಶೇಷವಾಗಿ ಪ್ರಿಯಾಂಕಾ, ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿ ಸಹಾಯ ಮಾಡುತ್ತಿದ್ದಾರೆ, ನಿರ್ಮಾಣದ ಅಂಶಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಕಾಶ್ಮೀರದಲ್ಲಿನ ಕಠಿಣ ಶೂಟಿಂಗ್ ಪರಿಸ್ಥಿತಿಗಳನ್ನು ನಿಭಾಯಿಸಲು ತಂಡಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಚಿತ್ರದ ಸೆಟ್‌ಗಳಲ್ಲಿ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಫೋಟೋ ಕಾಣಿಸಿಕೊಂಡಿದ್ದು, ತಮ್ಮ ಮಗನ ಮೊದಲ ಸಿನಿಮಾಗೆ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ತಿಳಿದು ಬಂದಿದೆ,
ನಿರ್ಮಾಪಕರು ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ರಹಸ್ಯವಾಗಿರಿಸಿದ್ದಾರೆ. ಕಾಶ್ಮೀರ ವೇಳಾಪಟ್ಟಿ ಪೂರ್ಣಗೊಂಡ ನಂತರ ಚಿತ್ರ ತಂಡವ ಪ್ರಮುಖ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


