ಆಲ್ಫಾ ಟ್ರೈಲರ್ ರಿಲೀಸ್ ಮಾಡಿದ ಶ್ರೀಮುರಳಿ; ನವ ನಟ ಹೇಮಂತ್ ರಗಡ್ ಅವತಾರಕ್ಕೆ ಮೆಚ್ಚುಗೆ!
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಲ್ಫಾ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ನವನಟ ಹೇಮಂತ್ ಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ. ಗೀತ, ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿರುವ 'ಆಲ್ಫಾ' ಚಿತ್ರದ ಟೀಸರ್ ಗಮನ ಸೆಳೆಯುವಂತಿದೆ.

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಲ್ಫಾ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ನವನಟ ಹೇಮಂತ್ ಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ. ಗೀತ, ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿರುವ 'ಆಲ್ಫಾ' ಚಿತ್ರದ ಟೀಸರ್ ಗಮನ ಸೆಳೆಯುವಂತಿದೆ. ನಾಯಕ ಹೇಮಂತ್ ಕುಮಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅಲ್ಪಾ' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಶ್ರೀಮುರಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ತಯಾರಿ ನನಗೆ ಗೊತ್ತು. ಡಯೆಟ್ ಮಾಡ್ಕೊಂಡು ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣೋದು ಇದೊಂದು ಟಾಸ್ಕ್ ಎಂದಿದ್ದಾರೆ. ನಾಯಕಿಗೆ ಗುಡ್ ಲುಕಿಂಗ್.. ಚೆನ್ನಾಗಿ ಕಾಣ್ತೀರ ಎಂದು ಹೇಳಿದ್ದಾರೆ. ಕಾರ್ತಿಕ್ ಮಹೇಶ್‌ಗೆ ನಿನ್ನ ಕಣ್ಣಲ್ಲಿ ಸ್ಪಾರ್ಕ್ ಕಾಣಿಸ್ತಾ ಇದೆ. ನನ್ನ ಜಡ್ಜ್‌ಮೆಂಟ್ ಸುಳ್ಳಾಗಲ್ಲ ಎಂದು ಹೇಳಿದರು. ಮ್ಯೂಸಿಕ್ ಡೈರೆಕ್ಟರ್ ಅನೂಪ್ ಸೀಳಿನ್ ಅವರಿಗೆ ವಿಶ್ ಮಾಡುತ್ತಾ ಚೆನ್ನಾಗಿ ಮ್ಯೂಸಿಕ್ ಕೊಟಿದ್ದೀರ ಎಂದು ಹೇಳಿದರು. ಅಲ್ಫಾ ಸಿನಿಮಾ ಚೆನ್ನಾಗಿದೆ. ಹೀರೋ ಚೆನ್ನಾಗಿ ಕಾಣ್ತಾನೆ. ಕಾರ್ತಿಕ್ ಲುಕ್ ಫ್ಯಾಬುಲಸ್, ಇದೊಂದು ಒಳ್ಳೆ ಟೀಮ್, ನಿರ್ಮಾಪಕರೇ ನೀವು ತಮ್ಮ ಮಗನನ್ನು ಲಾಂಚ್ ಮಾಡಿದ್ದೀರ, ಹೀಗೆಯೇ ಮುಂದೆ ಹಲವರನ್ನು ಲಾಂಚ್ ಮಾಡಿ ಎಂದು ಹೇಳಿದರು.
ಹೇಮಂತ್ ಮತ್ತು ಕಾರ್ತಿಕ್ ಮಹೇಶ್ ಅವರನ್ನು ಸ್ಟೇಜ್ ಮೇಲೆ ಕರೆದ ಮುರಳಿ ಇಬ್ಬರನ್ನು ಅಪ್ಪಿ ಶುಭ ಕೋರಿದರು. ಆಲ್ಫಾ ಸಿನಿಮಾ ಆಕ್ಷನ್ ಗಳ ಜೊತೆಗೆ ಅಪ್ಪ ಮತ್ತು ಮಗನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಈ ಚಿತ್ರದ ಮೂಲಕ ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದ ಮೂಲಕ ಆನಂದ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು 'ಎಲ್ ಎ' ಬ್ಯಾನರ್‌ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ.
ನಾಯಕ ಹೇಮಂತ್ ಕುಮಾರ್ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಘು ಶಿವಮೊಗ್ಗ ಅವರ ಬಳಿ ನಟನಾ ತಯಾರಿ ನಡೆಸಿದ್ದಾರೆ. ಅರ್ಜುನ್ ಜತೆ ಸಾಹಸ ಅಭ್ಯಾಸ ಮಾಡಿದ್ರೆ ಭೂಷಣ್ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜತೆಗೆ ಮಾರ್ಶಲ್ ಆರ್ಟ್ ಕಲಿತು ನಾಯಕನಾಗಲು ಬೇಕಾಗುವ ಎಲ್ಲಾ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಇದೆ.

ಆಲ್ಫಾ ಚಿತ್ರದ ಟ್ರೈಲರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



