ಸಿನಿಮಾ ಸುದ್ದಿ

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!

ಪತ್ನಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ತರುಣ್ ಸುಧೀರ್‌ ಅವರು ಪತ್ನಿ ಸೋನಲ್ ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ.

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!
ತರುಣ್ ಸುಧೀರ್ ಹಾಗೂ ಸೋನಲ್
Published On :

ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಒಟ್ಟಿಗೆ ಆಚರಿಸಿಕೊಳ್ಳುತ್ತಿರುವ ನಟಿ ಹಾಗೂ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ತರುಣ್ ಸುಧೀರ್ ಅವರು ಪತ್ನಿ ಸೋನಲ್ ಮಂಥೆರೋ ಅವರು ಡಬಲ್ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಪತ್ನಿ ಜೊತೆಗಿನ ಮುದ್ದಾದ, ಅನ್ ಸೀನ್ ಫೋಟೊಗಳನ್ನು ಶೇರ್ ಮಾಡಿ ವಿಶೇಷವಾಗಿ ಶುಭಾಶಯ ಹೇಳಿರುವ ತರುಣ್ ಸುಧೀರ್ ಅವರು ಪತ್ನಿ ಸೋನಾಲ್ ಅವರಿಗೆ ದುಬಾರಿ ಗಿಫ್ಟ್ ಸಹ ನೀಡಿದ್ದಾರೆ.

ಆಗಸ್ಟ್ 11 ರಂದು ಸೋನಲ್ ಮೊಂಥೆರೋ ಹುಟ್ಟುಹಬ್ಬ ಹಾಗೂ ಇಬ್ಬರ ಮದುವೆ ವಾರ್ಷಿಕೋತ್ಸವವೂ ಹೌದು. ಹಾಗಾಗಿ, ತಮ್ಮ ಜೀವನದಲ್ಲಿ ಪತ್ನಿಯಾಗಿ, ಗೆಳತಿಯಾಗಿ, ಜೊತೆಯಾದ ಸೋನಲ್ ಅವರಿಗೆ ತರುಣ್ ಸುಧೀರ್ ಹುಟ್ಟುಹಬ್ಬ ಹಾಗೂ ಎರಡನೇ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ಆಗಸ್ಟ್ 11, 2024 ರಂದು ತರುಣ್ ಸುಧೀರ್ - ಸೋನಲ್ ಮಂಥೆರೋ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

ಪತ್ನಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ತರುಣ್ ಸುಧೀರ್‌ ಅವರು ಸೋನಲ್ ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ತರುಣ್ ಅವರು ಸೋನಲ್ ಮಂಥೆರೋಗೆ ಚಿನ್ನದ ಉಂಗುರವನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.