ನಟ ಜಗ್ಗೇಶ್ ಕೈಗೆ ದುಬಾರಿ ವಾಚ್ ಗಿಫ್ಟ್ ನೀಡಿದ ಶಿವರಾಜ್ ಕುಮಾರ್-ಗೀತಾ ದಂಪತಿ! ಬೆಲೆ ಎಷ್ಟು ಗೊತ್ತಾ?
ಇತ್ತೀಚಿಗೆ ಶಿವರಾಜ್ ಕುಮಾರ್ ಮನೆಗೆ ತೆರಳಿದ ಜಗ್ಗೇಶ್ ಅವರು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಜಗ್ಗೇಶ್ ಕೈಗೆ ದುಬಾರಿ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ.

ಸಾಂಡಲ್ ವುಡ್ ನ ಹಿರಿಯ ನಟರಾದ ಶಿವರಾಜ್ ಕುಮಾರ್ ಹಾಗೂ ಜಗ್ಗೇಶ್ ನಡುವಿನ ಆತ್ಮೀಯತೆಗೆ ಸಾಕ್ಷಿಯಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇತ್ತೀಚಿಗೆ ಶಿವರಾಜ್ ಕುಮಾರ್ ಮನೆಗೆ ತೆರಳಿದ ಜಗ್ಗೇಶ್ ಅವರು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಜಗ್ಗೇಶ್ ಕೈಗೆ ದುಬಾರಿ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ. ಈ ವಾಚ್ ನ ಫೋಟೋವನ್ನು ಜಗ್ಗೇಶ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಅನೇಕರು ಶಿವಣ್ಣನನ್ನು ಹಿರಿಯ ಅಣ್ಣನಂತೆ ಭಾವಿಸುತ್ತಾರೆ. ಅದೇ ರೀತಿಯಲ್ಲಿ ಜಗ್ಗೇಶ್ ಅವರು ರಕ್ಷಾಬಂಧನವನ್ನು ಶಿವರಾಜ್ ಕುಮಾರ್ ಅವರಿಗೆ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಕ್ಕ ಅವರು 2.60 ಲಕ್ಷ ರೂ. ಬೆಲೆಯ ಐಷಾರಾಮಿ ವರ್ಸಾಶೆಯ ಗ್ರೆಸಾ ರಿಯಾಕ್ಷನ್ ವಾಚನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋವನ್ನು ಜಗ್ಗೇಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶಿವರಾಜ್ ಕುಮಾರ್ ನಡುವಿನ ನಾಲ್ಕು ದಶಗಳ ಆತ್ಮೀಯತೆ ಕುರಿತು ಬರೆದುಕೊಂಡಿದ್ದಾರೆ.
ಇಂದು ನನ್ನ ನಲ್ಮೆಯ ಸಹೋದರ ಶಿವರಾಜ್ ಕುಮಾರ್ ರವರ ಮನೆಗೆ ನನ್ನ ಆತ್ಮೀಯ ಮಿತ್ರ ಶ್ರೀನಿಧಿ ರವರೊಂದಿಗೆ ತೆರಳಿ ಅರ್ಧಘಂಟೆ ಕಾಲಕಳೆದು ಬಂದೆ, 40 ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗೆ ಉಳಿದಿದೆ. ಅವರ ಶ್ರೀಮತಿ ಗೀತ ಮನೆಗೆ ಬಂದ ಅಣ್ಣನಂತೆ ತಮ್ಮ ಮಮತೆ ನನಗೆ ವ್ಯೆಕ್ತಪಡಿಸಿ ಕೈಗಡಿಯಾರ ಕೊಡಿಸಿದ್ದು ಕಂಡು ಭಾವುಕನಾದೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಪ್ರೀತಿಯ ರಾಜಣ್ಣ ಅವರ ಸರ್ವಗುಣ ಮಗನಿಗೆ ಧಾರೆ ಎರೆದು ಹೋಗಿದ್ದಾರೆ. ರಾಜಣ್ಣನ ಜೊತೆ ಕೂತ ದಿನಗಳು ಮನಸ್ಸಿನಲ್ಲಿ ತರಂಗದಂತೆ ಮರುಕಳಿಸಿದವು, ಅವರ ಕುಟುಂಬಕ್ಕೆ ಸಂತೋಷ ಸಡಗರ ಚಿರಾಸ್ಥಿಯಂತೆ ನಿತ್ಯ ನಿರಂತರ ರಾಯರಕೃಪೆಯಿಂದ ಸಿಗಲಿ’ ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.
ಜಗ್ಗೇಶ್ ಮತ್ತು ಶಿವರಾಜ್ ಕುಮಾರ್ ಅವರದ್ದು ದಶಕಗಳ ಅನುಬಂಧ ಮತ್ತು ಸ್ನೇಹ. ಜಗ್ಗೇಶ್ ಅವರು ಹಲವು ವೇದಿಕೆಗಳನ್ನು ಶಿವಣ್ಣನನ್ನು ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಜಗ್ಗೇಶ್ ಅವರು, ಡಾ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯೂ ಆಗಿರುವ ಜಗ್ಗೇಶ್ ಅವರು ಅವರೊಟ್ಟಿಗೆ ತಾವು ಕಳೆದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಿವಣ್ಣನ ಬಗ್ಗೆ ಅವರ ಉದಾರತೆಯ ಬಗ್ಗೆಯೂ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



