ಸಿನಿಮಾ ಸುದ್ದಿ

Toxic: ಕೊನೆಗೂ 'ಟಾಕ್ಸಿಕ್' ಟ್ರೈಲರ್ ಬಿಡುಗಡೆ; ಡಾರ್ಕ್‌ ಗ್ಯಾಂಗ್‌ಸ್ಟರ್‌ ಲೋಕಕ್ಕೆ ರಾಕಿಂಗ್‌ ಸ್ಟಾರ್ ಎಂಟ್ರಿ; ಫ್ಯಾನ್ಸ್‌ ಫಿದಾ!

ಈಗಾಗಲೇ ಟಾಕ್ಸಿಕ್ ಚಿತ್ರದ ಟೀಸರ್, ಹಾಡುಗಳು ಮತ್ತು ಕ್ಲಿಪ್‌ಗಳು ಬಿಡುಗಡೆಯಾಗಿದ್ದು, ಟೀಸರ್ ಮತ್ತು ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

Toxic: ಕೊನೆಗೂ 'ಟಾಕ್ಸಿಕ್' ಟ್ರೈಲರ್ ಬಿಡುಗಡೆ; ಡಾರ್ಕ್‌ ಗ್ಯಾಂಗ್‌ಸ್ಟರ್‌ ಲೋಕಕ್ಕೆ ರಾಕಿಂಗ್‌ ಸ್ಟಾರ್ ಎಂಟ್ರಿ; ಫ್ಯಾನ್ಸ್‌ ಫಿದಾ!
ರಾಕಿಂಗ್‌ ಸ್ಟಾರ್ ಯಶ್
Published On :

ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್‌, ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಟ್ರೈಲರ್ ಕೊನೆಗೂ ಶನಿವಾರ ಬಿಡುಗಡೆಯಾಗಿದೆ.

ಈಗಾಗಲೇ ಟಾಕ್ಸಿಕ್ ಚಿತ್ರದ ಟೀಸರ್, ಹಾಡುಗಳು ಮತ್ತು ಕ್ಲಿಪ್‌ಗಳು ಬಿಡುಗಡೆಯಾಗಿದ್ದು, ಟೀಸರ್ ಮತ್ತು ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಟೀಕೆ ಸಹ ಮಾಡಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಚಿತ್ರತಂಡ ಇಂದು ಎಎಂಬಿ ಮಾಲ್​​ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಟ್ರೈಲರ್ ಅನ್ನು ರಿಲೀಸ್ ಮಾಡಿದೆ. ಟ್ರೈಲರ್, ನಿರೀಕ್ಷೆಯಂತೆ ಆಕ್ಷನ್ ಭರಿತವಾಗಿದೆ. ಟಾಕ್ಸಿಕ್​​​ನಲ್ಲಿ ಯಶ್ ರಾಯ, ರೂಮಿ ಮತ್ತು ಟಿಕೆಟ್‌ ಆಗಿ ಅಬ್ಬರಿಸಿದ್ದಾರೆ.

ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಡಾರ್ಕ್‌ ಮತ್ತು ಸ್ಟೈಲಿಶ್‌ ಜಗತ್ತಿನ ಮೊದಲ ಝಲಕ್‌ ಇದೀಗ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

‘KGF’ ಸರಣಿಯ ಅದ್ಭುತ ಯಶಸ್ಸಿನ ಬಳಿಕ ಯಶ್‌ ಅವರ ಮುಂದಿನ ಸಿನಿಮಾ ಹೇಗಿರಲಿದೆ ಎಂಬ ಪ್ರಶ್ನೆಗೆ ‘ಟಾಕ್ಸಿಕ್‌’ ಟ್ರೈಲರ್‌ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದೆ. ರಾ ಆ್ಯಕ್ಷನ್‌, ಗ್ಯಾಂಗ್‌ಸ್ಟರ್‌ ಜಗತ್ತು, ಅಧಿಕಾರದ ಆಟ, ದ್ರೋಹ, ಪ್ರೀತಿ ಮತ್ತು ಅಪಾಯಕಾರಿ ಸಂಬಂಧಗಳ ಸುತ್ತ ಹೆಣೆದಿರುವ ಕಥೆಯ ಸುಳಿವು ಟ್ರೈಲರ್‌ನಲ್ಲಿ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.