ಕೆಡಿ ಸೆನ್ಸಾರ್ ವಿವಾದ: ಕನ್ನಡ ಸಿನಿಮಾ ಎಂಬ ಕಾರಣಕ್ಕೆ ವ್ಯವಸ್ಥಿತ ರಾಜಕೀಯ- ನಿರ್ದೇಶಕ ಪ್ರೇಮ್
ಕೆವಿಎನ್ ಕೆಡಿ ಸಿನಿಮಾ ಮೇಲೆ ಸೆನ್ಸಾರ್ ಬೋರ್ಡ್ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಸಿನಿಮಾಗಳಿಗೆ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್‍ನಿಂದ ಅನ್ಯಾಯ ಆಗುತ್ತಿದೆ.

ವಿಜಯ್ ಅವರ ಜನ ನಾಯಗನ್ ನಂತರ ಕೆವಿಎನ್ ಪ್ರೊಡಕ್ಷನ್ಸ್ ಮತ್ತೊಂದು ಸೆನ್ಸಾರ್ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ತೋರುತ್ತಿದೆ. ಈ ಬಾರಿ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರಕ್ಕೆ ಅನಿರೀಕ್ಷಿತ ಅಡಚಣೆ ಎದುರಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕೆವಿಎನ್ ಕೆಡಿ ಸಿನಿಮಾ ಮೇಲೆ ಸೆನ್ಸಾರ್ ಬೋರ್ಡ್ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಸಿನಿಮಾಗಳಿಗೆ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್‍ನಿಂದ ಅನ್ಯಾಯ ಆಗುತ್ತಿದೆ. ನಿಮಯ ಉಲ್ಲಂಘಿಸಿ, ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿದೆ.
ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ 'ಎ' ಸರ್ಫಿಟಿಕೇಟ್ ನೀಡುವುದಾಗಿ ಹೇಳಿತ್ತು. ಹಾಡಿನ ಸಾಹಿತ್ಯ ಎರಡು ಸಾಲು ಬದಲಿಸಲು ಸೂಚನೆ ನೀಡಿತ್ತು. ಇದನ್ನು ಪಾಸ್ ಮಾಡದ ಕೇಂದ್ರ ಸೆನ್ಸಾರ್ ಮಂಡಳಿ, ಮತ್ತೆ ರಿವೈಸಿಂಗ್ ಕಮಿಟಿಗೆ ಕಳುಹಿಸಿ ಈ ಧೋರಣೆ ತೋರಿದೆ. ನಾವು ಸರಿಯಾದ ಮಾರ್ಗದ ಮೂಲಕ ಹೋಗಿದ್ದೇವೆ ಎಂದು ನಿರ್ದೇಶಕ ಪ್ರೇಮ್ ವಿವಾದದ ಬಗ್ಗೆ ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ, ಚಿತ್ರಕ್ಕೆ ಅನುಮತಿ ಸಿಗುತ್ತಿಲ್ಲ ಮತ್ತು ಮುಂಬೈನಲ್ಲಿರುವ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು. ನಮಗೆ ಸರಿಯಾದ ಸಂವಹನ ಮತ್ತು ಸ್ಪಷ್ಟತೆ ಇರಲಿಲ್ಲ. ನನಗಾಗಲಿ, ನಿರ್ಮಾಪಕರಿಗಾಗಲಿ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಔಪಚಾರಿಕವಾಗಿ ತಿಳಿಸಲಾಗಿಲ್ಲಇದು ಹೇಗಾಗುತ್ತದೆ ಎಂದು ಅವರು ಪ್ರಶ್ನಿಸುತ್ತಾರೆ.
ಕನ್ನಡ ಸಿನಿಮಾ ಅಂತಲೇ ರಾಜಕಾರಣ ಮಾಡ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಅರ್ಥ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪ್ರಾದೇಶಿಕ ಮಂಡಳಿಯು ಈಗಾಗಲೇ ಪರಿಶೀಲಿಸಿ ನಿರ್ದೇಶನ ನೀಡಿದ್ದರೆ ಅದನ್ನು ಅನುಸರಿಸಲು ಒಂದು ವ್ಯವಸ್ಥೆ ಇದೆ.
ಆ ವ್ಯವಸ್ಥೆಯನ್ನು ಬೈಪಾಸ್ ಮಾಡಲಾಗಿದೆ ಎಂದು ಅನಿಸುತ್ತದೆ, ಈಗ ಚಿತ್ರವು ಮುಂಬೈ ಪರಿಷ್ಕರಣಾ ಸಮಿತಿಗೆ ಹೋಗಿದೆ. ನಾವು ಪರಿಶೀಲನೆಗೆ ವಿರೋಧಿಯಲ್ಲ, ಆದರೆ ಪಾರದರ್ಶಕತೆ ಇರಬೇಕು. ಇದು ಕೇವಲ ಕೆಡಿ ಬಗ್ಗೆ ಅಲ್ಲ.
ಕನ್ನಡ ಚಲನಚಿತ್ರಗಳು ಆಗಾಗ್ಗೆ ಈ ಕೊನೆಯ ಕ್ಷಣದ ಅಡೆತಡೆಗಳನ್ನು ಎದುರಿಸುತ್ತಿವೆ. ಇದು ಸಿನಿಮಾ ಬಿಡುಗಡೆಯನ್ನು ವಿಳಂಬಗೊಳಿಸುತ್ತದೆ, ಯೋಜನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ತಂಡದ ಮೇಲೆ ಅನಗತ್ಯ ಒತ್ತಡವನ್ನು ಬೀರುತ್ತದೆ ಎಂದು ಪ್ರೇಮ್ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



