ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯ 'ಪಟಾಕಿ ಕಿಚನ್' ಉದ್ಘಾಟಿಸಿದ ಮ್ಯೂಟೆಂಟ್ ರಘು! ಏನಿದರ ವಿಶೇಷತೆ? Video ನೋಡಿ..
ರಕ್ಷಿತಾ ಶೆಟ್ಟಿ ಅವರು ಕಾಡಿನ ಮಧ್ಯೆ ಪಟಾಕಿ ಕಿಚನ್ ಎಂಬ ಹೆಸರಿನ ಅಡುಗೆಮನೆ ಅಥವಾ ಗುಡಿಸಲನ್ನು ನಿರ್ಮಿಸಿದ್ದಾರೆ. ಇಲ್ಲಿ ಅವರು ಪ್ರಕೃತಿ ಸ್ನೇಹಿ ಅಡುಗೆ ವಿಡಿಯೋಗಳನ್ನು ತಯಾರಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ನಾಡಿನಾದ್ಯಂತ ಮನೆ ಮಾತಾಗಿರುವ ರಕ್ಷಿತಾ ಶೆಟ್ಟಿ, ಇದೀಗ ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಕಾಡಿನ ಮಧ್ಯೆ ಪಟಾಕಿ ಕಿಚನ್ ಎಂಬ ಹೆಸರಿನ ಅಡುಗೆಮನೆ ಅಥವಾ ಗುಡಿಸಲನ್ನು ನಿರ್ಮಿಸಿದ್ದಾರೆ. ಇಲ್ಲಿ ಅವರು ಪ್ರಕೃತಿ ಸ್ನೇಹಿ ಅಡುಗೆ ವಿಡಿಯೋಗಳನ್ನು ತಯಾರಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದ್ದಾರೆ.
ಇದು ರಕ್ಷಿತಾ ಶೆಟ್ಟಿ ಅವರು ಕಾಡಿನ ಮಧ್ಯೆ ನಿರ್ಮಿಸಿರುವ ಸುಂದರವಾದ ಅಡುಗೆ ಮನೆಯಾಗಿದ್ದು, ಇದನ್ನು ಅವರು ತಮ್ಮ ಯೂಟ್ಯೂಬ್ ಕಂಟೆಂಟ್ ಸೃಜನೆಗಾಗಿ ಬಳಸಲಿದ್ದಾರೆ. ಇದನ್ನು ಸಂಪೂರ್ಣವಾಗಿ ಹಳ್ಳಿ ಶೈಲಿಯಲ್ಲಿ ನಿರ್ಮಾಣವಾಗಿದ್ದು, ನೈಸರ್ಗಿಕ ಪರಿಸರದಲ್ಲಿ ಸಾಂಪ್ರದಾಯಿಕ ಅಡುಗೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಮತ್ತೊಂದು ವಿಶೇಷ ಏನೆಂದರೆ, ಈ ಪುಟ್ಟ ಪಟಾಕಿ ಕಿಚನ್ ನನ್ನು ರಕ್ಷಿತಾ ಶೆಟ್ಟಿ ಅವರ ಆತ್ಮೀಯ ಅಣ್ಣನಂತಿರುವ ಮ್ಯೂಟೆಂಟ್ ರಘು (Mutant Raghu) ಉದ್ಘಾಟಿಸಿದ್ದಾರೆ. ಈ ವೇಳೆ ಪಟಾಕಿ ರಕ್ಷಿತಾ ಎಂಬ ಬೋರ್ಡ್ ಸಣ್ಣದಾಗಿದೆ ಎಂದು ರಘು ಕಿಚಾಯಿಸಿದ್ದಾರೆ. ಇದನ್ನು ಇನ್ನೂ ದೊಡ್ಡದಾಗಿ ಹಾಕಬೇಕು ಎಂಬ ಸಲಹೆಯನ್ನು ರಕ್ಷಿತಾ ನಗುನಗುತಲೇ ಒಪ್ಪಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್ ರಘು ನಡುವಿನ ಅಣ್ಣ-ತಂಗಿ ಸಂಬಂಧ ನಾಡಿನ ಗಮನ ಸೆಳೆದಿತ್ತು. ಅದು ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೂ ಮುಂದುವರೆದಿದೆ.
ಈ ಹಿಂದೆ ರಘು ಅವರ ಮನೆಗೆ ತೆರಳಿ ರಕ್ಷಿತಾ ಅಡುಗೆ ಮಾಡಿದ್ದರು. ಆ ವಿಡಿಯೋ ರಘು ಅವರ ಹೊಸ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿತ್ತು. ವಿಶೇಷವೆಂದರೆ ಆ ವಿಡಿಯೋ ಅಪ್‌ಲೋಡ್ ಆದ ಕೇವಲ ಒಂದೇ ದಿನದಲ್ಲಿ ಚಾನೆಲ್ ಮಾನಿಟೈಸೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ದಾಖಲೆ ಬರೆದಿತ್ತು.ಇದೀಗ ರಕ್ಷಿತಾ ಶೆಟ್ಟಿ ಅವರ ಹೊಸ ಉದ್ಯಮಕ್ಕೆ ಮ್ಯೂಟೆಂಟ್ ರಘು ಚಾಲನೆ ನೀಡಿದ್ದು, ಇನ್ಮುಂದೆ ಇಲ್ಲಿಂದಲೇ ವಿಡಿಯೋಗಳು ಹೊರಗೆ ಬರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



