ನಾವೀಗ ಮೂವರು..!: ವೀಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಗುಡ್ ನ್ಯೂಸ್ ಕೊಟ್ರಾ ನ್ಯಾಷನಲ್ ಕ್ರಶ್?
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಕಾರ್ಟೂನ್ ರೀಲ್ಸ್ ಪೋಸ್ಟ್ ಮಾಡಿರುವ ರಶ್ಮಿಕಾ ಅವರು, ನಾವೀಗ ಮೂವರು ಎಂದು ಹೇಳಿದ್ದು, ಈ ಪೋಸ್ಟ್ ಹಲವರ ಹುಬ್ಬೇರುವಂತೆ ಮಾಡಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹವಾಗಿ ಒಂದು ತಿಂಗಳಾಗಿದ್ದು, ಈ ನಡುವೆ ರಶ್ಮಿಕಾಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಂಚಿಕೊಂಡು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಕಾರ್ಟೂನ್ ರೀಲ್ಸ್ ಪೋಸ್ಟ್ ಮಾಡಿರುವ ರಶ್ಮಿಕಾ ಅವರು, ನಾವೀಗ ಮೂವರು ಎಂದು ಹೇಳಿದ್ದು, ಈ ಪೋಸ್ಟ್ ಹಲವರ ಹುಬ್ಬೇರುವಂತೆ ಮಾಡಿದೆ.
ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಅನಿಮೇಟೆಡ್ ಚಿತ್ರದೊಂದಿಗೆ ಸೂರ್ಯಕಾಂತಿಯ ಚಿತ್ರವೂ ಇದ್ದು, ರಶ್ಮಿಕಾ ಅವರ ಟಿ-ಶರ್ಟ್‌ನಲ್ಲಿ ಒಂದು ಮೊಟ್ಟೆಯ ಚಿತ್ರವೂ ಇದೆ. ಇನ್ನು ವಿಡಿಯೋ ನೋಡಿದವರು ನಾನಾ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದು, ಕೆಲವರಂತೂ ರಶ್ಮಿಕಾ ಮಂದಣ್ಣ ಗರ್ಭಿಣಿಯಾಗಿದ್ದಾರೆ ಮತ್ತು ಶೀಘ್ರದಲ್ಲೇ ತಾಯಿಯಾಗುತ್ತಾರೆಂದು ಹೇಳುತ್ತಿದ್ದಾರೆ. ಆದರೆ, ಅಸಲಿ ಸುದ್ದಿ ಬೇರೆಯೇ ಇದೆ.
ರಶ್ಮಿಕಾ ಹೊಸ ಅನಿಮೇಟೆಡ್ ಪಾತ್ರ ಸೂರ್ಯಕಾಂತಿಯನ್ನು ತಮ್ಮ ಆಪ್ತ ಸ್ನೇಹಿತೆಯೆಂದು ಪರಿಗಣಿಸುತ್ತಾರೆ. ಅದಕ್ಕಾಗಿ ಅವರು ಈ ಪಾತ್ರಕ್ಕೆ ವಿಶೇಷ ಖಾತೆ ರಚಿಸಿದ್ದಾರೆ. ಆ ಖಾತೆಯಲ್ಲಿ ಹೂವಿನೊಂದಿಗೆ ತಮ್ಮ ಸಿಹಿ ಕ್ಷಣಗಳು, ಕಥೆಗಳು, ಅನಿಮೇಟೆಡ್ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಈಗ, ವಿಜಯ್ ಅವರನ್ನು ಈ ಅನಿಮೇಷನ್ ಜಗತ್ತಿಗೆ ಆಹ್ವಾನಿಸುವ ಮೂಲಕ, “ನಾವೀಗ ಮೂವರು” ಎಂದು ಹೇಳಿದ್ದಾರೆ.
ಇನ್ನು ರಶ್ಮಿಕಾ ಮತ್ತು ರೂ (Rashmika & Ru) ಎಂಬುದು 'ಟೆರಿಬ್ಲಿ ಟೈನಿ ಟೇಲ್ಸ್' (TTT) ಸಂಸ್ಥೆಯು ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೂಡಿ ಸಿದ್ಧಪಡಿಸಿದ ಒಂದು ವಿಶೇಷ ಸರಣಿ.
ಈ ‘ರೂ (Ru)’ ಎಂಬ ಪಾತ್ರವು ರಶ್ಮಿಕಾ ಮಂದಣ್ಣ ಅವರ ನೈಜ ಗುಣಲಕ್ಷಣಗಳಿಂದ ಪ್ರೇರಿತವಾಗಿದೆ. ಈ ಪಾತ್ರ ಜನರ ಜೀವನದಲ್ಲಿ ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆ ಹರಡುವುದನ್ನು ಉದ್ದೇಶಿಸಿದೆ. ‘ರೂ’ ಸರಳವಾಗಿ ಹೇಳುವುದಾದರೆ, ರಶ್ಮಿಕಾ ಅವರ ಹಸನ್ಮುಖಿ, ದಯಾಳು ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ನೆಮ್ಮದಿ ಮತ್ತು ನಗು ನೀಡುವ ಒಂದು ಪುಟ್ಟ ಪ್ರಯತ್ನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



