ಸಿನಿಮಾ ಸುದ್ದಿ

ಗಾಯಕಿ ವಾರಿಜ ಶ್ರೀ ಜೊತೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿವಾಹ!

ವಾರಿಜಶ್ರೀ ವೇಣುಗೋಪಾಲ್‌ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ಮತ್ತು ಕೊಳಲು ವಾದಕಿಯಾಗಿದ್ದು, ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

ಗಾಯಕಿ ವಾರಿಜ ಶ್ರೀ ಜೊತೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿವಾಹ!
ರಘು ದೀಕ್ಷಿತ್ ಮತ್ತು ವಾರಿಜ ಶ್ರೀ ಮದುವೆ
Published On :

ಬೆಂಗಳೂರು: ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಗಾಯಕಿ ವಾರಿಜ ಶ್ರೀ ಮತ್ತು ರಘು ಧೀಕ್ಷಿತ್ ಜೊತೆಗಿನ ಮದುವೆ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

ಹೌದು.. ಖ್ಯಾತ ಗಾಯಕ ರಘು ದೀಕ್ಷಿತ್‌ ಅವರು ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದು, 50 ವರ್ಷ ವಯಸ್ಸಿನ ರಘು ದೀಕ್ಷಿತ್‌ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್‌ ಅವರ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ.

ಗಾಯಕ ರಘು ದೀಕ್ಷಿತ್‌ ಮತ್ತು ವಾರಿಜಶ್ರೀ ವೇಣುಗೋಪಾಲ್‌ ಅವರು ಈ ತಿಂಗಳಾಂತ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ವಾರಿಜಶ್ರೀ ವೇಣುಗೋಪಾಲ್‌ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ಮತ್ತು ಕೊಳಲು ವಾದಕಿಯಾಗಿದ್ದು, ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

ಇನ್ನು ರಘು ದೀಕ್ಷಿತ್ ಮತ್ತು ವಾರಿಜ ಶ್ರೀ ಮದುವೆಗೆ ಸಿನಿ ಲೋಕದ ನಟರು ಹಾಜರಾಗಿದ್ದರು. ನಟಿ ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಮದುವೆಗೆ ಹಾಜರಾಗಿದ್ದರು. ಈ ಕುರಿತ ಫೋಟೋಗಳನ್ನು ನಟಿ ಯಮುನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ 50 ವರ್ಷ ವಯಸ್ಸಿನ ರಘು ದೀಕ್ಷಿತ್ ಅವರಿಗೆ ಇದು 2ನೇ ಮದುವೆಯಾಗಿದ್ದು, ಈ ಮೊದಲು (2005) ಅವರು ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ವಿವಾಹವಾಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. ಬಳಿಕ ಇನ್ನೊಂದು ಮದುವೆ ಬಗ್ಗೆ ರಘು ದೀಕ್ಷಿತ್ ಅವರು ಆಲೋಚನೆ ಮಾಡಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಬೆಳೆದ ಬಳಿಕ ಮದುವೆ ಬಗ್ಗೆ ನಿರ್ಧರಿಸಿದರು. ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.