ಕೈಗೆ ಚುಂಬಿಸಿದ ವಿಜಯ್ ದೇವರಕೊಂಡ, ನಾಚಿ ನೀರಾದ ರಶ್ಮಿಕಾ; Video Viral
ಕಳೆದ ಹಲವು ದಿನಗಳಿಂದ ಈ ಜೋಡಿಯ ವಿವಾಹದ ಸುದ್ದಿ ಹಬ್ಬಿದೆ. ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು.

‘ದಿ ಗರ್ಲ್ ಫ್ರೆಂಡ್’ (The Girlfriend) ಸಿನಿಮಾ ಸಕ್ಸಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯ್ ದೇವರಕೊಂಡ, ರಶ್ಮಿಕಾ ಕೈಗೆ ಮುತ್ತು ಕೊಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಕಳೆದ ಹಲವು ದಿನಗಳಿಂದ ಈ ಜೋಡಿಯ ವಿವಾಹದ ಸುದ್ದಿ ಹಬ್ಬಿದೆ. ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು. ಈ ದೃಶ್ಯವನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಭಾಂಗಣದಲ್ಲಿ ನಗೆಗಡಲಲ್ಲಿ ತೇಲಾಡಿದರು. ಆ ಸಮಯದಲ್ಲಿ, ರಶ್ಮಿಕಾ ನಾಚಿ ನೀರಾದರು.
ಕೊನೆಗೂ ಸಾರ್ವಜನಿಕವಾಗಿ ಒಪ್ಪಿಕೊಂಡರಲ್ಲಾ ಎಂದು ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



