'ಜಾವಾ' ಸಿನಿಮಾದಲ್ಲಿ ಡೇರಿಂಗ್, ಬೋಲ್ಡ್ ಅವತಾರದಲ್ಲಿ ರಾಗಿಣಿ ದ್ವಿವೇದಿ!
ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.

ರಾಗಿಣಿ ದ್ವಿವೇದಿ ಅವರ ಮುಂದಿನ ಚಿತ್ರ 'ಜಾವಾ'ದಲ್ಲಿ ಹಿಂದೆಂದೂ ಕಾಣದ ಡೇರಿಂಗ್ ಹಾಗೂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.
ದೇವಾ ಚಕ್ರವರ್ತಿ ನಿರ್ದೇಶನದ, ಜಾವಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ಉತ್ತಮ ಕಥಾಹಂದರದೊಂದಿಗೆ ಮಾಸ್ ಪ್ರಿಯರನ್ನು ಇಷ್ಟಪಡಿಸುವ ನಿರೀಕ್ಷೆಯಿದೆ.
ಜಾವಾದಲ್ಲಿ ರಾಗಿಣಿ ದ್ವಿವೇದಿಯದು ಪ್ರಮುಖ ಪಾತ್ರವಾಗಿದೆ. ಈ ಹಿಂದೆ ನೋಡಿಲ್ಲದ ಬೋಲ್ಡ್ ಅವತಾರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಪ್ರತಿ ಫ್ರೇಮ್ನಲ್ಲಿಯೂ ಕಮಾಂಡಿಂಗ್ ಮಾಡುವ ದಿಟ್ಟ ಮಹಿಳಾ ನಾಯಕಿಯಾಗಿದ್ದಾರೆ. ರಾಗಿಣಿ ಕೇವಲ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು R Queen ಆಗಿ ಹೊರಹೊಮ್ಮಲಿದ್ದಾರೆ ಎಂದು ನಿರ್ದೇಶಕ ದೇವಾ ತಿಳಿಸಿದರು.
ಆಕೆಯ ಜನ್ಮದಿನದಂದೂ ಬಿಡುಗಡೆಯಾದ ಫಸ್ಟ್ ಲುಕ್ ಫೋಸ್ಟರ್ ನಲ್ಲಿ ಅವರಲ್ಲಿ ಇರುವ ಶಕ್ತಿ ಏನೆಂಬುದು ತೋರಿಸಿದೆ ಎಂದು ಅವರು ಹೇಳಿದರು.
'ಜಾವಾ' ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಜುಲೈ ಅಂತ್ಯದ ವೇಳೆಗೆ ಶೂಟಿಂಗ್ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



