ಸಿನಿಮಾ ಸುದ್ದಿ

ಶಿವಣ್ಣನ ಮನೆಯಲ್ಲಿ ಸೀಕ್ರೆಟ್ ಮೀಟಿಂಗ್, ಸಭೆಯಲ್ಲಿ ಯಾರ್ಯಾರು ಇದ್ರು, ಚರ್ಚಿಸಿದ್ದೇನು?

ಸಭೆಯಲ್ಲಿ ಗಣೇಶ್, ದುನಿಯಾ ವಿಜಯ್, ಧ್ರುವಾ ಸರ್ಜಾ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು. ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಕೂಡ ಮೀಟಿಂಗ್​ನಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಶಿವಣ್ಣನ ಮನೆಯಲ್ಲಿ ಸೀಕ್ರೆಟ್ ಮೀಟಿಂಗ್, ಸಭೆಯಲ್ಲಿ ಯಾರ್ಯಾರು ಇದ್ರು, ಚರ್ಚಿಸಿದ್ದೇನು?
ಶಿವರಾಜ್ ಕುಮಾರ್ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ನಾಗವಾರದ ನಿವಾಸದಲ್ಲಿ ಇಂದು ಇದಕ್ಕಿದ್ದಂತೆ ಸೀಕ್ರೆಟ್ ಮೀಟಿಂಗ್ ನಡೆದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಭೆಯಲ್ಲಿ ಗಣೇಶ್, ದುನಿಯಾ ವಿಜಯ್, ಧ್ರುವಾ ಸರ್ಜಾ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು. ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಕೂಡ ಮೀಟಿಂಗ್​ನಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಕನ್ನಡ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಥೀಯೇಟರ್​ಗೆ ಜನ ಬರುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಥೀಯೇಟರ್ ಕೊರತೆ, ಟಿಕೆಟ್ ಬೆಲೆ ವಿಚಾರ, ದಿನೇ ದಿನೇ ಕಡಿಮೆ ಆಗುತ್ತಿರೋ ಕನ್ನಡ ಸಿನಿಮಾಗಳು, ಪ್ರೊಡ್ಯೂಸರ್​ಗಳ ಸಂಕಷ್ಟ, ವಿತರಕರು-ಪ್ರದರ್ಶಕರ ಸಂಕಷ್ಟ ಹೀಗೇ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ.

ಸಭೆ ಬಳಿಕ ಮಾಹಿತಿ ನೀಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಥಿಯೇಟರ್ ಸಮಸ್ಯೆ ದೂರ ಮಾಡಲು, ಶಿವಣ್ಣ ಮನೇಲಿ ಸಭೆ ಆಯೋಜಿಸಲಾಗಿತ್ತು. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಹೀರೋಗಳು ಐದು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು, ವರ್ಷಕ್ಕೆ ಎರಡು ಸಿನಿಮಾಗಳು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಥಿಯೇಟರ್ ಮುಚ್ಚುತ್ತಿರೋದರ ಕುರಿತು ಬಹುಮುಖ್ಯವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

ಸ್ಟಾರ್ ಸಿನಿಮಾಗಳಿಂದ ಥಿಯೇಟರ್​ಗಳು ಉಳಿಯುತ್ತವೆ. ಹೀಗಾಗಿ ಸ್ಟಾರ್​ಗಳು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕು. ಥಿಯೇಟರ್​ಗಳಿಗೆ ಜನ ಬರುತ್ತಿಲ್ಲ, ಇದು ದೊಡ್ಡ ಸಮಸ್ಯೆ ಆಗಿದೆ. ಥಿಯೇಟರ್​ಗಳಿಗೆ ಲ್ಯಾಂಡ್ ಟ್ಯಾಕ್ಸ್, ಸಬ್ಸಿಡಿ, ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವಂತೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಡಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.