ಬಿಗ್ ಬಾಸ್ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಹೊಸ ಚಿತ್ರ ಘೋಷಣೆ; ಸಸ್ಪೆನ್ಸ್ ಥ್ರಿಲ್ಲರ್ 'ಹ್ಯಾರಿ' ಶೀರ್ಷಿಕೆ
ಚಿತ್ರದಲ್ಲಿ ನವಾಜ್, ಅಶೋಕ್ ಕೆರವತ್ತಿ, ಕಿರಣ್ ಮತ್ತು ಪ್ರೇಮ್ ಜೊತೆಗೆ ಪ್ರೀತಿ ನಾಯಕಿಯಾಗಿ ನಟಿಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಹೊಸ ಚಿತ್ರದೊಂದಿಗೆ ಮತ್ತೆ ನಟನೆಯತ್ತ ಮರಳುತ್ತಿದ್ದಾರೆ. ಚಿತ್ರಕ್ಕೆ 'ಹ್ಯಾರಿ' ಎಂದು ಹೆಸರಿಡಲಾಗಿದ್ದು, ಸೂರ್ಯ ಕಿರಣ್ ಮತ್ತು ಅರುಣ್ ಸೂರ್ಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವು ಸಸ್ಪೆನ್ಸ್ ಮತ್ತು ಥ್ರಿಲ್ಗಳಿಂದ ತುಂಬಿರುವ ಮರ್ಡರ್ ಮಿಸ್ಟರಿಯಾಗಿದೆ.
ದೈವಿಕ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಪ್ರಶಾಂತ್ ಹೆಚ್ ಇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹ್ಯಾರಿ ನಿರೀಕ್ಷಿಸಲಾಗದ ಮಾನವ ನಡವಳಿಕೆ ಮತ್ತು ಅದು ಉಂಟುಮಾಡಬಹುದಾದ ಅನಿರೀಕ್ಷಿತ ಪರಿಣಾಮಗಳ ಬಗ್ಗೆ ಹೇಳುತ್ತದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಲಂಬಾಣಿ (2018), ಕೋಲ್ಕತ್ತಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಅನಿವಾರ್ಯ (2019) ಚಿತ್ರಗಳ ಮೂಲಕ ಧರ್ಮ ಕೀರ್ತಿರಾಜ್ ಹೆಸರು ಗಳಿಸಿದ್ದಾರೆ. ಇದೀಗ ಸ್ವಲ್ಪ ವಿರಾಮದ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ಚಿತ್ರದಲ್ಲಿ ನವಾಜ್, ಅಶೋಕ್ ಕೆರವತ್ತಿ, ಕಿರಣ್ ಮತ್ತು ಪ್ರೇಮ್ ಜೊತೆಗೆ ಪ್ರೀತಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಶಾಶ್ತ್ ಅವರ ಸಂಗೀತ ಸಂಯೋಜನೆ, ಗಗನ್ ಅವರ ಛಾಯಾಗ್ರಹಣ, ಶ್ರೀನಿವಾಸ್ ಅವರ ಸಂಕಲನ ಮತ್ತು ಕುಂಗ್ಫು ಚಂದ್ರು ಅವರ ಸಾಹಸ ದೃಶ್ಯಗಳನ್ನು ಒಳಗೊಂಡಿದೆ.
ಮಡಿಕೇರಿ ಮತ್ತು ಚಿಕ್ಕಮಗಳೂರಿನಂತಹ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಬಾಕಿಯಿರುವ ಎರಡು ಹಾಡುಗಳು ಮತ್ತು ಆಕ್ಷನ್ ಸೀಕ್ವೆನ್ಸ್ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಯೋಜಿಸಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ನಂತರ ಚಿತ್ರ ಬಿಡುಗಡೆ ಕುರಿತು ಅಧಿಕೃತ ಪ್ರಕಟಣೆ ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


