ಶಿವರಾಜ್‌ಕುಮಾರ್ ನಟನೆಯ, ಅರ್ಜುನ್ ಜನ್ಯ ನಿರ್ದೇಶನದ ಬಹುನಿರೀಕ್ಷಿತ '45' ಬಿಡುಗಡೆಗೆ ದಿನಾಂಕ ಫಿಕ್ಸ್!
ನಟ ಉಪೇಂದ್ರ ಈ ಕಾರ್ಯಕ್ರಮವು ಆಚರಣೆಯಾಗಿದೆ ಎಂದರೆ, ರಾಜ್ ಬಿ ಶೆಟ್ಟಿ ಅವರು ಈ ಸಿನಿಮಾ 'ಕನಸಿನ ಸಹಯೋಗ' ಎಂದು ವಿವರಿಸಿದರು.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಬಹುನಿರೀಕ್ಷಿತ ಚಿತ್ರ '45' ತೆರೆಗೆ ಬರಲು ಸಜ್ಜಾಗಿದೆ. ಚಿತ್ರತಂಡ ನವೀನ 3D ವಿಡಿಯೋ ಮೂಲಕ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ನಟ ಶಿವರಾಜ್‌ಕುಮಾರ್ ಅಭಿನಯದ '45' ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತ್ರತಂಡವು ದೃಶ್ಯಾತ್ಮಕವಾಗಿರುವ ಕ್ಲಿಪ್ ಮೂಲಕ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ನಟ ಶಿವಣ್ಣ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೈಕ್ ಮುಂಭಾಗ ಮೂರು ಬಂದೂಕುಗಳನ್ನು ಅಳವಡಿಸಿಕೊಂಡು ದಾಳಿಕೋರರಿಗೆ ಶೂಟ್ ಮಾಡುತ್ತಾ ಮುಂದೆ ಸಾಗುವುದನ್ನು ಕಾಣಬಹುದು. ಕೊನೆಯಲ್ಲಿ ನಟನೆ ಮುಖದೊಂದಿಗೆ ಚಿತ್ರಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಸದ್ಯ ಅಮೆರಿಕದ ಮಿಯಾಮಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಶಿವರಾಜಕುಮಾರ್, 'ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ ಇದು ನನ್ನ ಮೊದಲ ಸಹಯೋಗವಾಗಿದೆ. ಅರ್ಜುನ್ ಜನ್ಯ ಅವರು ಚಿತ್ರದಲ್ಲಿ ಅದ್ಭುತಗಳನ್ನು ಮಾಡಿದ್ದಾರೆ ಮತ್ತು MARZ VFX ಸ್ಟುಡಿಯೋ ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಉದ್ಯಮದ ದಿಗ್ಗಜರು ಭಾಗವಹಿಸಿದ್ದರು. ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, 'ಕಥೆಯು ಗಮನಾರ್ಹ ಹೂಡಿಕೆಯನ್ನು ಬಯಸಿದೆ ಮತ್ತು ಅಂತಿಮವಾಗಿ ಪ್ರೇಕ್ಷಕರು ಚಿತ್ರವನ್ನು ಮೆಚ್ಚುತ್ತಾರೆ ಎಂದು ನಾನು ನಂಬುತ್ತೇನೆ' ಎಂದರು.

ಕೃತಜ್ಞತೆ ತಿಳಿಸಿದ ನಿರ್ದೇಶಕ ಅರ್ಜುನ್ ಜನ್ಯ, ದೊಡ್ಡ ದೊಡ್ಡ ಸ್ಟಾರ್‌ಗಳು ಮತ್ತು ಅಂತರಾಷ್ಟ್ರೀಯ VFX ಪರಿಣತಿಯೊಂದಿಗೆ ಇದು ಚೊಚ್ಚಲ ಕನಸಿನ ಯೋಜನೆಯಾಗಿದೆ ಎಂದು ಹೇಳಿದರು.
ನಟ ಉಪೇಂದ್ರ ಈ ಕಾರ್ಯಕ್ರಮವು ಆಚರಣೆಯಾಗಿದೆ ಎಂದರೆ, ರಾಜ್ ಬಿ ಶೆಟ್ಟಿ ಅವರು ಈ ಸಿನಿಮಾ 'ಕನಸಿನ ಸಹಯೋಗ' ಎಂದು ವಿವರಿಸಿದರು.
ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ 45 ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುವ ಭರವಸೆ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


