'ಜೈ' ತುಳು ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ; ಚೊಚ್ಚಲ ನಿರ್ದೇಶನದ ಅನುಭವ ಹಂಚಿಕೊಂಡ ರೂಪೇಶ್ ಶೆಟ್ಟಿ
'ಅವರು ಮುಂದೊಂದು ದಿನ ತುಳು ಸಿನಿಮಾ ಮಾಡ್ತಾರೆ ಅಂತ ಗೊತ್ತಿತ್ತು. ಆದರೆ, ನಾನು ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತೇನೆ ಅಂತ ಅಂದುಕೊಂಡಿರಲಿಲ್ಲ'

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಇತ್ತೀಚೆಗಷ್ಟೇ ತಮ್ಮ ಚೊಚ್ಚಲ ನಿರ್ದೇಶನದ 'ಜೈ' ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತುಳು ಮೂಲದವರೇ ಆಗಿರುವ ಸುನೀಲ್ ಶೆಟ್ಟಿ, ತುಳು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
'ಸುನೀಲ್ ಶೆಟ್ಟಿ ಅವರು ಮುಂದೊಂದು ದಿನ ತುಳು ಸಿನಿಮಾ ಮಾಡ್ತಾರೆ ಅಂತ ಗೊತ್ತಿತ್ತು. ಆದರೆ, ನಾನು ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತೇನೆ ಅಂತ ಅಂದುಕೊಂಡಿರಲಿಲ್ಲ. ನನಗೆ ಅವರು ನನಗೆ ವೈಯುಕ್ತಿಕವಾಗಿಯೂ ಸಂಪರ್ಕದಲ್ಲಿರಲಿಲ್ಲ ಅಥವಾ ಬೇರೆ ಯಾವುದೇ ಕಡೆಯಿಂದಲೂ ಪರಿಚಯವಿರಲಿಲ್ಲ. ಕೊನೆಗೆ ನಿರ್ಮಾಪಕರೊಬ್ಬರ ಮೂಲಕ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ಸಿಕ್ಕಾಗ ಸಿನಿಮಾದ ಬಗ್ಗೆ ನಾನು ಮಾತನಾಡುತ್ತೇನೆಂಬ ಯೋಚನೆ ಅವರಿಗಿರಲಿಲ್ಲ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆಯೇ ಹೋದೆ. ನಾನು ಅವರನ್ನು ಭೇಟಿಯಾಗುತ್ತೇನೆ ಮತ್ತು ಫೋಟೊ ತೆಗೆದುಕೊಂಡು ಬರುತ್ತೇನೆ ಎಂದು ಭಾವಿಸಿದ್ದೆ. ಅಚ್ಚರಿ ಎಂದರೆ ಮಂಗಳೂರಿನಲ್ಲಿ ನಡೆಯುವ 'ಜೈ' ಕಥೆಯನ್ನು ಹೇಳಲು ನನಗೆ ಐದು ನಿಮಿಷ ಸಮಯ ಸಿಕ್ಕಿತು. ಅದು ಅವರ ಆಸಕ್ತಿಯನ್ನು ಕೆರಳಿಸಿತು' ಎನ್ನುತ್ತಾರೆ ರೂಪೇಶ್ ಶೆಟ್ಟಿ.
'ಕಥೆ ಕೇಳಿದ ಬಳಿಕ ಅವರ ಉತ್ಸಾಹವನ್ನು ಕಂಡ ನಾನು, ಆ ಪಾತ್ರದಲ್ಲಿ ನಟಿಸುವಂತೆ ಕೇಳಿದೆ ಮತ್ತು ಅವರು ಅದಕ್ಕೆ ಒಪ್ಪಿಗೆ ನೀಡಿದರು. ಅವರೊಂದಿಗೆ ಚಿತ್ರೀಕರಣ ಮಾಡುವುದು ನನ್ನ ಜೀವನದ ದೊಡ್ಡ ಅನುಭವವಾಗಿದೆ. ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಕೇವಲ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ನಾವು 2025ರ ದ್ವಿತೀಯಾರ್ಧದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


