ಸಿನಿಮಾ ಸುದ್ದಿ

ಸಪ್ತಪದಿ ತುಳಿಯಲು 'ಅಗ್ನಿ ಸಾಕ್ಷಿ' ನಟಿ ವೈಷ್ಣವಿ ಗೌಡ ಸಜ್ಜು: ಬಾಯ್ ಫ್ರೆಂಡ್ ಜೊತೆ ನಿಶ್ಚಿತಾರ್ಥ

ವೈಷ್ಣವಿ ಗೌಡ ಅವರು ಅಕಾಯ್‌ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು. ವೈಷ್ಣವಿ ಗೌಡ ಮತ್ತು ಅಕಾಯ್‌ ನಿಶ್ಚಿತಾರ್ಥದ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಸಪ್ತಪದಿ ತುಳಿಯಲು 'ಅಗ್ನಿ ಸಾಕ್ಷಿ' ನಟಿ ವೈಷ್ಣವಿ ಗೌಡ ಸಜ್ಜು: ಬಾಯ್ ಫ್ರೆಂಡ್ ಜೊತೆ ನಿಶ್ಚಿತಾರ್ಥ
ವೈಷ್ಣವಿಗೌಡ ನಿಶ್ಚಿತಾರ್ಥ
Published On :

ಅಗ್ನಿ ಸಾಕ್ಷಿ ಹಾಗೂ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ಅಕಾಯ್‌ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು. ವೈಷ್ಣವಿ ಗೌಡ ಮತ್ತು ಅಕಾಯ್‌ ನಿಶ್ಚಿತಾರ್ಥದ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಅಕಾಯ್‌ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕಾಯ್‌ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ಶೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ಶೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು.

Story image

ಕುಟುಂಬಸ್ಥರ ಸಮ್ಮುಖದಲ್ಲಿ ವೈಷ್ಣವಿ ಗೌಡ, ಅಕಾಯ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ವೈಷ್ಣವಿ ಗೌಡ ಅವರು ಸಾಂಪ್ರದಾಯಿಕವಾಗಿ ಎಂಗೇಜ್‌ ಆಗಿದ್ದು, ಸಂಜೆ ಬರ್ತ್‌ಡೇ ಪಾರ್ಟಿ ಇತ್ತು ಎನ್ನಲಾಗಿದೆ.

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್​ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.