ಸಿನಿಮಾ ಸುದ್ದಿ

BRAT ಭಾಷೆಗಳನ್ನು ಮೀರಿದ ವಿಶಿಷ್ಟ ಶೀರ್ಷಿಕೆ: ನಿರ್ದೇಶಕ ಶಶಾಂಕ್ ಸಂದರ್ಶನ

ಈ ಚಿತ್ರವು ತಂದೆ-ಮಗನ ಸಂಘರ್ಷದ ಸುತ್ತ ಸುತ್ತುತ್ತದೆ. ಹಿರಿಯ ನಟ ಅಚ್ಯುತ್ ಕುಮಾರ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

BRAT ಭಾಷೆಗಳನ್ನು ಮೀರಿದ ವಿಶಿಷ್ಟ ಶೀರ್ಷಿಕೆ: ನಿರ್ದೇಶಕ ಶಶಾಂಕ್ ಸಂದರ್ಶನ
ಮಂಜುನಾಥ್ ಕಂದಕೂರ್, ಶಶಾಂಕ್, ಮನಿಶಾ, ಕೃಷ್ಣ
Published On :

ತಮ್ಮ ಮುಂದಿನ ಚಿತ್ರದ ಹೆಸರನ್ನು BRAT ಎಂದು ಬಹಿರಂಗಪಡಿಸಿರುವ ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ, ಇದು ಕೇವಲ ಹೆಸರಲ್ಲ. ಭಾಷೆಗಳನ್ನು ಮೀರಿದ ವಿಶಿಷ್ಟ ಶೀರ್ಷಿಕೆ ಎಂದು ಒತ್ತಿ ಹೇಳಿದ್ದಾರೆ.

ಈ ಜೋಡಿಯು BRAT ಚಿತ್ರವನ್ನು ಪ್ಯಾನ್ ಇಂಡಿಯಾ ಮೂಲಕ ಹಲವು ಭಾಷೆಗಳಿಗೆ ಕೊಂಡೊಯ್ಯಲು ಉತ್ಸುಕವಾಗಿದೆ ಮತ್ತು ಎಲ್ಲೆಡೆ ಪ್ರೇಕ್ಷಕರನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ. ಹೀಗಾಗಿ ಚಿತ್ರದ ಶೀರ್ಷಿಕೆಯನ್ನು ಐದು ಭಾಷೆಗಳಲ್ಲಿ ಬಿಡುಗಡೆಯಾದ ರ‍್ಯಾಪರ್ ರಾಹುಲ್ ಡಿಟ್ಟೊ ಅವರ ಹಾಡಿನ ಮೂಲಕ, ವಿಶಿಷ್ಠ ರೀತಿಯಲ್ಲಿ ಅನಾವರಣಗೊಳಿಸಲಾಗಿದೆ.

BRAT ಎಂದರೆ ಕಿಡಿಗೇಡಿತನ ಮತ್ತು ಅತಿ ಹೆಚ್ಚು ತರಲೆ ಮಾಡುವ ಹುಡುಗರನ್ನು ಬ್ರ್ಯಾಟ್ ಎಂದು ಕರೆಯಲಾಗುತ್ತದೆ. "ಸಾಮಾನ್ಯವಾಗಿ ಹದಿನಾರು ವರ್ಷದೊಳಗಿನ ಚೇಷ್ಟೆಯ ಹುಡುಗರಿಗೆ ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ" ಎಂದು ಶಶಾಂಕ್ ಹೇಳಿದ್ದಾರೆ.

"ನಮ್ಮ ಚಿತ್ರವು ಯುವಕರನ್ನು ಹೆಚ್ಚಾಗಿ ಪ್ರತಿನಿಧಿಸುತ್ತದೆ. ಹೀಗಾಗಿ ಚಿತ್ರಕ್ಕೆ ಈ ಶೀರ್ಷಿಕೆ ಸೂಕ್ತ ಎಂದು ತೀರ್ಮಾನಿಸಿದೆವು. ಈ ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವುದರಿಂದ BRAT ಎಲ್ಲಾ ಭಾಷೆಗಳಲ್ಲಿ ವಿಶಿಷ್ಟವಾಗಿ ಎದ್ದು ಕಾಣುತ್ತದೆ" ಎಂದರು.

ನಾಯಕ ನಟ ಕೃಷ್ಣ ಅವರು ಹಲವು ಭಾಷೆಯ ಚಿತ್ರದಲ್ಲಿ ಅಭಿನಯಿಸುವ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದು, "ನಾನು ಹೆಚ್ಚಾಗಿ ಪ್ರಣಯ ಅಥವಾ ಕುಟುಂಬ ಆಧಾರಿತ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ BRAT ವಿಭಿನ್ನವಾಗಿದೆ. ಇದು ಅಪರೂಪದ, ವಿಶಿಷ್ಟ ಕಥೆ ಮತ್ತು ಮೊದಲ ಬಾರಿಗೆ ನನ್ನ ಪಾತ್ರಕ್ಕೆ ತಯಾರಿ ನಡೆಸಲು ನಾನು ಕಾರ್ಯಾಗಾರಕ್ಕೆ ಸಹ ಹಾಜರಾಗಿದ್ದೆ. ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ" ಎಂದು ವಿವರಿಸಿದ್ದಾರೆ.

ಈ ಚಿತ್ರವು ತಂದೆ-ಮಗನ ಸಂಘರ್ಷದ ಸುತ್ತ ಸುತ್ತುತ್ತದೆ. ಹಿರಿಯ ನಟ ಅಚ್ಯುತ್ ಕುಮಾರ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. "ತಂದೆಗೆ, ಅವರ ಮಗನೇ 'ಬ್ರ್ಯಾಟ್' ಎಂದು ಶಶಾಂಕ್ ಬಹಿರಂಗಪಡಿಸಿದರು.

ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ ಮನಿಶಾ ಕಂದಕೂರ್ ಮಧ್ಯಮ ವರ್ಗದ ಹುಡುಗಿಯಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ತೇಜಸ್, ಗೌರವ್ ಶೆಟ್ಟಿ ಮತ್ತು ಸಂಚಿತ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ಚಿತ್ರಕ್ಕಾಗಿ ಶಶಾಂಕ್ ಅವರು, ಫಸ್ಟ್ ರ‍್ಯಾಂಕ್ ರಾಜು ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರೊಂದಿಗೆ ಕೈಜೋಡಿಸಿದ್ದಾರೆ. "ಶಶಾಂಕ್ ಹೇಳಿದ ಕಥೆ ನನ್ನನ್ನು ಆಕರ್ಷಿಸಿತು. ಅದಕ್ಕಾಗಿಯೇ, ಐದು ವರ್ಷಗಳ ನಂತರ, ನಾನು ನಿರ್ಮಾಣಕ್ಕೆ ಮರಳಲು ನಿರ್ಧರಿಸಿದೆ" ಎಂದು ಮಂಜುನಾಥ್ ಹೇಳುತ್ತಾರೆ. ಚಿತ್ರದ ಛಾಯಾಗ್ರಹಣವನ್ನು ಅಭಿಲಾಷ್ ಕಲಾತಿ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.