BiggBoss Kannada Season 11: ಬಿಗ್ ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳು ಇವರೇ ನೋಡಿ!
ಇದು ಸ್ವರ್ಗ, ನರಕದ ಹೊಸ ಅಧ್ಯಾಯ. ಈ ಬಾರಿ ಸ್ಪರ್ಧಿಗಳಲ್ಲಿ ಕೆಲವರು ಸ್ವರ್ಗದಲ್ಲಿದ್ದರೆ ಕೆಲವರು ನರಕದಲ್ಲಿ ಇರುತ್ತಾರೆ. ಮುಂದಿನ ದಿನಗಳಲ್ಲಿ ಅವರ ಉತ್ತಮ ಹಾಗೂ ಕಳಪೆ ಪ್ರದರ್ಶನದ ಮೇಲೆ ಸ್ಪರ್ಧಿಗಳ ಹಣೆಬರಹ ಬದಲಾಗುತ್ತಿರುತ್ತದೆ.

Published On :

ಲಾಯರ್ ಜಗದೀಶ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಮೂಲಕ ಜಗದೀಶ್ ವಿವಾದಕ್ಕೆ ಗುರಿಯಾಗುತ್ತಿದ್ದರು.

ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಎಂದು ಖ್ಯಾತಿ ಪಡೆದಿದ್ದ, ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಹೇಳಿ ಉದ್ಯಮಿಯೊಬ್ಬರನ್ನು ವಂಚಿಸಿ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.

ಗೀತಾ ಧಾರಾವಾಹಿಯ ನಟಿ ಭವ್ಯ ಗೌಡ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಕರ್ನಾಟಕದ ಗೀತಾ ಆಗಿದ್ದೆ. ಇನ್ಮುಂದೆ ಬಿಗ್ ಬಾಸ್ನಲ್ಲಿ ಭವ್ಯ ಗೌಡ ಏನು ಅಂತ ತೋರಿಸುವೆ ಎಂದು ನಟಿ ಹೇಳಿದ್ದಾರೆ.

ಸದಾ 2 ಕೋಟೆ ಬೆಲೆಬಾಳುವ ಚಿನ್ನಾಭರಣಗಳನ್ನು ಧರಿಸುವ ಗೋಲ್ಡ್ ಸುರೇಶ್ ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಅಶ್ವಿನಿ ನಕ್ಷತ್ರ, ಅಮೃತ ವರ್ಷಿಣಿ ಮುಂತಾದ ಸೀರಿಯಲ್ಗಳಲ್ಲಿ ನಟಿಸಿರುವ ಭರತನಾಟ್ಯ ಡ್ಯಾನ್ಸರ್ ಕೂಡ ಆಗಿರುವ ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಮಾನಸಾ ತುಕಾಲಿ ಸಂತೋಷ್ ಅವರು ಗಿಚ್ಚಿ ಗಿಲಿಗಿಲಿ 3ರ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

ಗೌತಮಿ ಜಾಧವ್ ನಾಗ ಪಂಚಮಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಸತ್ಯ ಧಾರವಾಹಿಯಲ್ಲಿನ ರಗಡ್ ಲುಕ್ ಪ್ರೇಕ್ಷಕರನ್ನು ಸೆಳೆದಿತ್ತು.

ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದೆ. ನವಗ್ರಹ ಸಿನಿಮಾ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಎಂಟ್ರಿ ಕೊಟ್ಟಿದ್ದಾರೆ.

ಕರಾವಳಿಯ ಯುವಕ ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2017ರಲ್ಲಿ ತೆರೆಕಂಡ ಮಹಾನುಭಾವರು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಅನುಷಾ ರೈ ಇಂದು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ತ್ರಿವಿಕ್ರಮ್ ಪದ್ಮಾವತಿ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದು 8ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದರೆ ಶಿಶಿರ್ ಕುಲವಧು ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದು 9ನೇ ಸ್ವರ್ಧಿಯಾಗಿ ಆಗಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


