ಕೈ ಮುರಿತದಿಂದ ದರ್ಶನ್ ಚೇತರಿಕೆ: ಮೇ ಅಂತ್ಯಕ್ಕೆ ಡೆವಿಲ್ ಸಿನಿಮಾ ಚಿತ್ರೀಕರಣ ಪುನಃ ಆರಂಭ
ಅಕ್ಷಯ ತೃತೀಯದ ದಿನದಂದು ದರ್ಶನ್ ನಟನೆಯ ಡೆವಿಲ್- ದಿ ಹೀರೋ ಸಿನಿಮಾ ತಂಡ ತೆರೆಮರೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಸಿನಿ ಪ್ರಿಯರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

ಅಕ್ಷಯ ತೃತೀಯದ ದಿನದಂದು ದರ್ಶನ್ ನಟನೆಯ ಡೆವಿಲ್- ದಿ ಹೀರೋ ಸಿನಿಮಾ ತಂಡ ತೆರೆಮರೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಸಿನಿ ಪ್ರಿಯರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಈ ವೀಡಿಯೋದಲ್ಲಿ ಆಕ್ಷನ್ ದೃಶ್ಯಗಳಿದ್ದು, ವೀಕ್ಷಕರ ನಿರೀಕ್ಷೆ ಕುತೂಹಲಗಳನ್ನು ಹೆಚ್ಚಿಸಿದೆ.
ಪ್ರಕಾಶ್ ವೀರ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅಂಜನೀಶ್ ಲೋಕನಾಥ್ ತೊಡಗಿಸಿಕೊಂಡಿದ್ದು, ಸಿನಿಮಾಟೋಗ್ರಾಫರ್ ಆಗಿ ಸುಧಾಕರ್ ಎಸ್ ರಾಜ್ ಇದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಪ್ಪು ಹಾಗೂ ಕೆಂಪು ಬಣ್ಣದ ಸೂಟ್ ನಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಅವರ ಈ ಲುಕ್ ಈ ವರೆಗಿನ ಅವರ ಚಿತ್ರಗಳಲ್ಲೇ ಅತ್ಯಂತ ವಿಶಿಷ್ಟವಾಗಿದೆ.
ಇದೇ ವೇಳೆ, ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಕೈ ಮುರಿದುಕೊಂಡಿದ್ದ ದರ್ಶನ್ ಈಗ ಚೇತರಿಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಮೇ.15 ರಿಂದ ಮತ್ತೆ ಆರಂಭವಾಗಲಿದೆ.
ಮಾಧ್ಯಮದೊಂದಿಗಿನ ಇತ್ತೀಚಿನ ಸಂವಾದದಲ್ಲಿ, ದರ್ಶನ್ ಅವರು 'ಡೆವಿಲ್' ಚಿತ್ರವನ್ನು ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದರೂ, ಅದು ಕೆಲವು ತಿಂಗಳು ವಿಳಂಬವಾಗಬಹುದು ಎಂಬ ಮಾಹಿತಿ ಬಹಿರಂಗಪಡಿಸಿದ್ದರು.
ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಈಗಾಗಲೇ ಸಿನಿಮಾ ತಂಡದಲ್ಲಿದ್ದು, ನಾಯಕಿಗಾಗಿ ಚಿತ್ರದ ಹುಡುಕಾಟ ಇನ್ನೂ ನಡೆಯುತ್ತಿದೆ.ೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



