ಸಿನಿಮಾ ಸುದ್ದಿ

ಸಂತೋಷ್ ಬಾಲರಾಜ್ ನಟನೆಯ, ಭೂತಾರಾಧನೆಯ ಕಥೆಯುಳ್ಳ 'ಸತ್ಯಂ' ಚಿತ್ರಕ್ಕೆ U/A ಪ್ರಮಾಣಪತ್ರ

'ಕೆಂಪ', 'ಕರಿಯ‌ 2' ಹಾಗೂ 'ಗಣಪ' ಚಿತ್ರಗಳಿಗೆ ಹೆಸರಾದ ನಟ ಸಂತೋಷ್ ಬಾಲರಾಜ್ ಮತ್ತು ರಂಜನಿ ರಾಘವನ್ ನಟನೆಯ, ಅಶೋಕ ಕಡಬ ನಿರ್ದೇಶನದ 'ಸತ್ಯಂ' ಚಿತ್ರ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಈ ಚಿತ್ರವು ತುಳುನಾಡು ಪ್ರದೇಶದಲ್ಲಿ ಪ್ರಸಿದ್ಧವಾಗಿರುವ ಪಂಜುರ್ಲಿ ದೈವದ ಸುತ್ತ ಚಿತ್ರ ಕೇಂದ್ರೀಕೃತವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

ಸಂತೋಷ್ ಬಾಲರಾಜ್ ನಟನೆಯ, ಭೂತಾರಾಧನೆಯ ಕಥೆಯುಳ್ಳ 'ಸತ್ಯಂ' ಚಿತ್ರಕ್ಕೆ U/A ಪ್ರಮಾಣಪತ್ರ
ಸಂತೋಷ್ ಬಾಲರಾಜ್
Published On :

'ಕೆಂಪ', 'ಕರಿಯ‌ 2' ಹಾಗೂ 'ಗಣಪ' ಚಿತ್ರಗಳಿಗೆ ಹೆಸರಾದ ನಟ ಸಂತೋಷ್ ಬಾಲರಾಜ್ ಮತ್ತು ರಂಜನಿ ರಾಘವನ್ ನಟನೆಯ, ಅಶೋಕ ಕಡಬ ನಿರ್ದೇಶನದ 'ಸತ್ಯಂ' ಚಿತ್ರ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಈ ಚಿತ್ರವು ತುಳುನಾಡು ಪ್ರದೇಶದಲ್ಲಿ ಪ್ರಸಿದ್ಧವಾಗಿರುವ ಪಂಜುರ್ಲಿ ದೈವದ ಸುತ್ತ ಚಿತ್ರ ಕೇಂದ್ರೀಕೃತವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

ಚಿತ್ರತಂಡ ಈಗ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಕೆಎ ಸುರೇಶ್ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಅಶೋಕ ಕಡಬ ಅವರು ಏನಂತಿಯಾ ಮತ್ತು ಮೈ ನೇಮ್ ಈಸ್ ಕಲಾಂ ಮತ್ತು ಮೈಥಿಲಿಯಂತಹ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ. ಸತ್ಯಂ ಅನ್ನು ಕಮರ್ಷಿಯಲ್ ಅಂಶಗಳೊಂದಿಗೆ ಕಂಟೆಂಟ್ ಆಧರಿತ ಕಥೆಯನ್ನು ಹೊಂದಿದೆ ಎಂದು ವಿವರಿಸುತ್ತಾರೆ.

ಚಿತ್ರದಲ್ಲಿ ಸುಮನ್, ಸಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್ ಮತ್ತು ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ, ಸಿನೆಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಮಹಾಂತೇಶ್ ವಿಕೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸತ್ಯಂ ಚಿತ್ರವು ಅಜ್ಜ ಮತ್ತು ಮೊಮ್ಮಗನ ನಡುವಿನ ಬಾಂಧವ್ಯವನ್ನು ಕೇಂದ್ರೀಕರಿಸುವ ಮೂಲಕ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಎರಡು ತಲೆಮಾರುಗಳ ಕಥೆಯನ್ನು ಹೇಳುತ್ತದೆ. ನಾಲ್ಕು ದಶಕಗಳ ನಂತರ ಕುಟುಂಬದ ಮುಖ್ಯಸ್ಥ ಹಳ್ಳಿಗೆ ಹಿಂದಿರುಗಿದಾಗ ಸಂಭವಿಸುವ ಘಟನೆಗಳನ್ನು ತೋರಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.