ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾದ 'ಟ್ರೋಲಾಗುತ್ತೆ' ಹಾಡು ರಿಲೀಸ್: ಗಮನಸೆಳೆದ ರೀಷ್ಮಾ ನಾಣಯ್ಯ
ಉಪೇಂದ್ರ ಅವರ UI ಚಿತ್ರದ ಟ್ರೋಲಾಗತ್ತೆ ಹಾಡನ್ನು ಇತ್ತೀಚೆಗೆ ಲಹರಿ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ಹಲವಾರು ಕಾರಣಗಳಿಂದ ತೀವ್ರ ಸಂಚಲನ ಮೂಡಿಸಿದೆ.

ಉಪೇಂದ್ರ ಅವರ UI ಚಿತ್ರದ ಟ್ರೋಲಾಗತ್ತೆ ಹಾಡನ್ನು ಇತ್ತೀಚೆಗೆ ಲಹರಿ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ಹಲವಾರು ಕಾರಣಗಳಿಂದ ತೀವ್ರ ಸಂಚಲನ ಮೂಡಿಸಿದೆ. ಈ ಹಾಡು ಕರಿಮಣಿ ಮಾಲಿಕ ನೀನಲ್ಲ, ನಾನು ನಂದಿನಿ, ಬೆಳ್ಳುಳ್ಳಿ ಕಬಾಬ್ ಮುಂತಾದ ಟ್ರೆಂಡಿಂಗ್ ರೀಲ್‌ಗಳು ಮತ್ತು ಮೀಮ್‌ಗಳಿಂದ ಸಂಯೋಜಿಸಲಾಗಿದ್ದು, ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಾಡಿನಲ್ಲಿ ರೀಷ್ಮಾ ನಾಣಯ್ಯ ಸಖತ್ ನೃತ್ಯದ ಮೂಲಕ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮತ್ತು ಗೀತರಚನೆಕಾರ ಅನೂಪ್ ಭಂಡಾರಿ ಹಿಂದಿ ಹಾಡಿನ ಸಾಹಿತ್ಯ ಬರೆದಿದ್ದು, ಹಿಂದಿ ಆವೃತ್ತಿಯು ಉತ್ತರ ಭಾರತದಲ್ಲಿ ಸದ್ಯ ಟ್ರೆಂಡ್ ಆಗಿರುವ ಪ್ರಸಿದ್ಧ ವಿಚಾರಗಳನ್ನು ಒಳಗೊಂಡಿದೆ. ರಾಂಬಾಬು ಗೋಸಾಲ ಅವರು ತೆಲುಗು ಆವೃತ್ತಿಯನ್ನು ಬರೆದಿದ್ದಾರೆ ಮತ್ತು ವೆ ಮದನ್ ಕುಮಾರ್ ತಮಿಳಿನಲ್ಲಿ ಸಾಹಿತ್ಯವನ್ನು ಬರೆದಿದ್ದಾರೆ.
ಕನ್ನಡ ಅವತರಣಿಕೆಗೆ ಐಶ್ವರ್ಯಾ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಮತ್ತು ಅನೂಪ್ ಭಂಡಾರಿ ಧ್ವನಿ ನೀಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ನರೇಶ್ ಕುಮಾರ್ ಎಚ್‌ಎನ್ ಸಾಹಿತ್ಯ ಬರೆದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಈ ಹಾಡು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಉಪೇಂದ್ರ ನಾಯಕನಾಗಿ ನಟಿಸಿರುವ ಯುಐ ಚಿತ್ರವನ್ನು ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಜಿ ಮನೋಹರನ್ ಮತ್ತು ಶ್ರೀಕಾಂತ್ ಕೆಪಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಚ್‌ಸಿ ವೇಣುಗೋಪಾಲ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



