ಸಿನಿಮಾ ಸುದ್ದಿ

ಸದ್ದಿಲ್ಲದೆ ಹಸೆಮಣೆ ಏರಿದ ನಟಿ ದೀಪಿಕಾ ದಾಸ್: ಗೋವಾದಲ್ಲಿ ಸಪ್ತಪದಿ ತುಳಿದ 'ನಾಗಿಣಿ'!

ಸದ್ದಿಲ್ಲದೇ ಬಿಗ್ ಬಾಸ್ ಬೆಡಗಿ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಸದ್ದಿಲ್ಲದೆ ಹಸೆಮಣೆ ಏರಿದ ನಟಿ ದೀಪಿಕಾ ದಾಸ್: ಗೋವಾದಲ್ಲಿ ಸಪ್ತಪದಿ ತುಳಿದ 'ನಾಗಿಣಿ'!
ದೀಪಿಕಾ ದಾಸ್
Published On :

ಕಿರುತೆರೆಯ ನಟಿ ದೀಪಿಕಾ ದಾಸ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ದಿಲ್ಲದೇ ಬಿಗ್ ಬಾಸ್ ಬೆಡಗಿ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಕೃಷ್ಣ ರುಕ್ಮಿಣಿ, ನಾಗಿಣಿ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿಯನ್ನು ನಟಿ ಮದುವೆ ಆಗಿದ್ದಾರೆ.

ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು ಎನ್ನಲಾಗಿದೆ. ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ಈ ಮೂರು ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ‘ಮಿಸ್ಟರ್ & ಮಿಸೆಸ್ ಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಡಿ-ದೀಪಿಕಾ ಎಂಬುದು ಎಲ್ಲರಿಗೂ ಗೊತ್ತು. ಹುಡುಗನ ಹೆಸರು ಕೂಡ ‘ಡಿ’ ಅಕ್ಷರಿದಿಂದಲೇ ಶುರುವಾಗಲಿದೆಯಾ? ಗೊತ್ತಿಲ್ಲ.

ದೀಪಿಕಾ ದಾಸ್ ಅವರ ಜೊತೆಗೆ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ದೀಪಿಕಾ ಕೂಡ ಆ ಬಗ್ಗೆ ಮಾಹಿತಿ ನೀಡಿಲ್ಲ.

ನಾಗಿಣಿ ಖ್ಯಾತಿಯ ನಟಿ, ಬಿಗ್ ಬಾಸ್ 9ರ ಸ್ಪರ್ಧಿ ದೀಪಿಕಾ ದಾಸ್ ಮದುವೆಯಾಗಿದ್ದಾರಾ? ಎಂಗೇಜ್ಮೆಂಟ್, ಪ್ರೀವೆಡ್ಡಿಂಗ್ ಫೋಟೋಸ್ ಏನನ್ನೂ ಮಾಡಿಸದೇ ನೇರವಾಗಿ ಹಸೆಮಣೆ ಏರಿದ್ದಾರೆಯೇ ನಟಿ ದೀಪಿಕಾ ದಾಸ್ ಎಂಬ ಪ್ರಶ್ನೆಯನ್ನು ಹಲವರು ಈಗ ಕೇಳತೊಡಗಿದ್ದಾರೆ. ಬಿಗ್ ಬಾಸ್ ಶೋದಲ್ಲಿ ನಟ, ಹಾಗೂ ವಿನ್ನರ್ ಶೈನ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.