ಸಿನಿಮಾ ಸುದ್ದಿ

ದಾಸವಾಳ ಚಹಾ ಕುಡಿಯಲು ನಯನತಾರಾ ಸಲಹೆ: ವೈದ್ಯರ ಟೀಕೆಯಿಂದ ಮುಜುಗರಕ್ಕೊಳಗಾದ ನಟಿ!

ಇದು ನನ್ನ ನೆಚ್ಚಿನ ಚಹಾ ಮತ್ತು ಮುನ್ಮುನ್ ಗನೇರಿವಾಲ್ ಸಿದ್ಧಪಡಿಸಿದ ಆಹಾರಗಳಲ್ಲಿ ಇದು ಅತ್ಯಂತ ರೋಮಾಂಚನಕಾರಿ. ಇದನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಚಹಾದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳಿವೆ.

ದಾಸವಾಳ ಚಹಾ ಕುಡಿಯಲು ನಯನತಾರಾ ಸಲಹೆ: ವೈದ್ಯರ ಟೀಕೆಯಿಂದ ಮುಜುಗರಕ್ಕೊಳಗಾದ ನಟಿ!
ನಯನತಾರಾ
Published On :

ಮುಂಬೈ: ನಟಿ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ದಾಸವಾಳ ಚಹಾದ ಕುರಿತ ಪೋಸ್ಟ್‌ ಈಗ ವಿವಾದಕ್ಕೆ ಸಿಲುಕಿದೆ. ಸಾಮಾಜಿಕ ಜಾಲತಾಣದಲ್ಲಿ ಲಿವರ್‌ ಡಾಕ್ಟರ್‌ ಎಂದೇ ಹೆಸರು ಪಡೆದಿರುವ ಸೈರಿಕ್ ಅಬೆ ಫಿಲಿಫ್ಸ್‌ ಎನ್ನುವವರು ನಯನತಾರಾ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ನನ್ನ ನೆಚ್ಚಿನ ಚಹಾ ಮತ್ತು ಮುನ್ಮುನ್ ಗನೇರಿವಾಲ್ ಸಿದ್ಧಪಡಿಸಿದ ಆಹಾರಗಳಲ್ಲಿ ಇದು ಅತ್ಯಂತ ರೋಮಾಂಚನಕಾರಿ. ಇದನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಚಹಾದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳಿವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಸಹಕಾರಿ. ಇದು ತುಂಬಾ ತಂಪಾಗಿರುತ್ತದೆ. ಆದ್ದರಿಂದ ತ್ವಚೆಯ ಮೇಲೆ ಹುಣ್ಣು ಮುಂತಾದ ಸಮಸ್ಯೆಗಳಿರುವವರಿಗೆ ಈ ಚಹಾ ಒಳ್ಳೆಯದು. ಈ ಟೀಯಲ್ಲಿ ಸಾಕಷ್ಟು ವಿಟಮಿನ್ ಗಳಿವೆ ಎಂದು ನಯನತಾರಾ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಫಿಲಿಫ್ಸ್‌ ‘ದಾಸವಾಳ ಚಹಾ ಇಷ್ಟೆಲ್ಲ ಮಾಡುತ್ತದೆ ಎನ್ನುವುದು ಎಲ್ಲಿಯೂ ಸಾಬೀತಾಗಿಲ್ಲ’ ಎಂದು ಬರೆದುಕೊಂಡಿದ್ದಾರೆ. ‘ಸೆಲೆಬ್ರಿಟಿಗಳ ಈ ರೀತಿಯ ನಡವಳಿಕೆಯನ್ನು ನಿಗ್ರಹಿಸಲು ಕಾನೂನುಗಳ ಅಗತ್ಯವಿದೆ. ಆರೋಗ್ಯಕರ ಆಹಾರದ ಆಯ್ಕೆಯ ಬಗ್ಗೆ ತಿಳಿಸಲು, ಪುರಾವೆ ಆಧಾರಿತ ವೈಜ್ಞಾನಿಕ ಶಿಕ್ಷಣವನ್ನು ಒದಗಿಸಲು ನೋಂದಾಯಿತ ವೈದ್ಯರಿಗೆ (ಆಯುಷ್ ಅಲ್ಲದ) ಅಧಿಕಾರ ಮತ್ತು ಬೆಂಬಲ ನೀಡಬೇಕು’ ಎಂದು ಹೇಳಿದ್ದಾರೆ.

ಲಕ್ಷಾಂತರ ಅಭಿಮಾನಿಗಳನ್ನು ನಯನತಾರಾ ದಾರಿತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದರು. ದಾಸವಾಳದ ಚಹಾವನ್ನು ಟೇಸ್ಟಿ ಎಂದು ಹೇಳಿ ನಿಲ್ಲಿಸಿದ್ದರೆ ಸರಿಹೋಗುತಿತ್ತು. ಆದರೆ ಅವರು ಇನ್ನು ಮುಂದೆ ಹೋಗಿ ಮಧುಮೇಹ, ಅಧಿಕ ರಕ್ತದೊತ್ತಡ, ಮೊಡವೆ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಜ್ವರದಿಂದ ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಇದು ಎಲ್ಲಿಯೂ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.

ಇತ್ತ ನಯನತಾರ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡು, ಮೂರ್ಖರೊಂದಿಗೆ ವಾದ ಮಾಡಬೇಡಿ, ಅವರು ಅವರ ಹಂತಕ್ಕೆ ಇಳಿಸುತ್ತಾರೆ ಬಳಿಕ ಅನುಭವದ ಮೂಲಕ ಹೊಡೆಯುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ ‘ಯಾರಿಗೆಲ್ಲ ವಿವರಣೆ ಬೇಕು ತೆಗೆದುಕೊಳ್ಳಿ’ ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.