'ನಿಮಗೆ ಚಹಾ ಮಾರುವಂತೆ ನಾವು ಕೇಳಿದ್ದೆವಾ': ಪ್ರಧಾನಿ ಮೋದಿ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ; Video
ಮುಂದಿನ ಪ್ರತಿಭಟನೆಗಳನ್ನು ಗೋವಾ ಮತ್ತು ಕರ್ನಾಟಕದಲ್ಲಿ ನಡೆಸುವ ಮೂಲಕ ಅಭಿಯಾನವನ್ನು ದೇಶಾದ್ಯಂತ ವಿಸ್ತರಿಸುವುದಾಗಿ CJP ಘೋಷಿಸಿತು.

ಮುಂಬೈ: ಗಾಂಧಿ ಜಯಂತಿ ದಿನವಾದ ನಿನ್ನೆ ಮುಂಬೈನ ಪ್ರತಿಷ್ಠಿತ ಶಿವಾಜಿ ಪಾರ್ಕ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ತನ್ನ ಎರಡನೇ ಹಂತದ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿತು. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಬಹಿರಂಗವಾದ ವರದಿಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ಈ ಅಭಿಯಾನ ನಡೆಸಲಾಯಿತು. ಇದೇ ವೇಳೆ, ಚಳವಳಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮುಂದಿನ ಪ್ರತಿಭಟನೆಗಳನ್ನು ಗೋವಾ ಮತ್ತು ಕರ್ನಾಟಕದಲ್ಲಿ ನಡೆಸುವ ಮೂಲಕ ಅಭಿಯಾನವನ್ನು ದೇಶಾದ್ಯಂತ ವಿಸ್ತರಿಸುವುದಾಗಿ CJP ಘೋಷಿಸಿತು.
ಬಿಜೆಪಿಯನ್ನು ಟೀಕಿಸಿದ ದೀಪ್ಕೆ, ಒಂದು ದೇಶ, ಒಂದು ಚುನಾವಣೆ ಎಂಬುದು ಕೇವಲ ಘೋಷಣೆ, ಬಿಜೆಪಿಗೆ ಬೇಕಾಗಿರುವುದು ಒಂದು ದೇಶ, ಒಂದು ಪಕ್ಷ ಎಂದು ಹೇಳಿದರು.
“ಗೋ ಜ್ಞಾನೂ ಗೋ” ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ ಯುವಜನರು ಬೀದಿಗಿಳಿದರು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಯಶಸ್ವಿ ಪ್ರತಿಭಟನೆಯ ಕೆಲವೇ ತಿಂಗಳ ಬಳಿಕ ನಡೆದ ಎರಡನೇ ಬೃಹತ್ ಪ್ರತಿಭಟನೆ ಇದಾಗಿದೆ. NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಜಂತರ್ ಮಂತರ್ ಪ್ರತಿಭಟನೆಯ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.
ವೇದಿಕೆಯ ಹಿಂಭಾಗದಲ್ಲಿ ‘Gaddar Gyanu Must Go: Save Democracy’ ಎಂಬ ಬರಹವಿತ್ತು. Gen Z ಯುವಜನರು ‘ಜ್ಞಾನೂ... ಇಟ್ಸ್ ಡನ್ ಬ್ರೋ’, ‘ಜ್ಞಾನೂ ಕಾಕಾ, ರಾಜೀನಾಮೆ ನೀಡಿ ಹೋಗಿ’ ಎಂಬ ಘೋಷಣೆಗಳನ್ನು ಕೂಗಿದರು.
ಚಹಾ ಮಾರಲು ಯಾರು ಹೇಳಿದ್ದರು?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ದೀಪ್ಕೆ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರ ವ್ಯಕ್ತಿತ್ವ ಮತ್ತು ಸ್ಥಾನಮಾನವನ್ನು ಅವರು ಮೀರಲು ಸಾಧ್ಯವಿಲ್ಲ ಎಂದು ಹೇಳಿದರು.
ಗಾಂಧೀಜಿ ಭಾರತದ ಆತ್ಮ, ಅಂಬೇಡ್ಕರ್ ಭಾರತದ ಬೆನ್ನೆಲುಬು, ನೆಹರು ಭಾರತದ ಮನಸ್ಸು ಎಂದು ದೀಪ್ಕೆ ಹೇಳಿದಾಗ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಭಾರಿ ಕರತಾಡನ ಮಾಡಿದರು.
ದೇಶವು ಗಾಂಧೀಜಿಯ ತತ್ವಗಳ ಆಧಾರದ ಮೇಲೆ ನಡೆಯಲಿದೆ, ನಾಥೂರಾಮ್ ಗೋಡ್ಸೆಯ ತತ್ವಗಳ ಮೇಲೆ ಅಲ್ಲ ಎಂದು ದೀಪ್ಕೆ ಹೇಳಿದರು.
ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂಬ ಅಭಿಯಾನಕ್ಕೆ ಗಾಂಧಿ ಜಯಂತಿ ಆಚರಣೆಗಳೊಂದಿಗೆ ಚಾಲನೆ ನೀಡಲಾಗಿದ್ದು, ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆಯ ಹಿಂಭಾಗದಲ್ಲಿ ‘Gaddar Gyanu Must Go: Save Democracy’ ಎಂಬ ಬರಹವಿದ್ದರೆ, Gen Z ಯುವಜನರು ‘ಜ್ಞಾನೂ... ಇಟ್ಸ್ ಡನ್ ಬ್ರೋ’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿದರು.
ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ದೀಪ್ಕೆ, ಅವರು ಯಾವಾಗಲೂ ಜನರು ಸರದಿಯಲ್ಲಿ ನಿಲ್ಲಬೇಕೆಂದು ಬಯಸುತ್ತಾರೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ, ಕೋವಿಡ್ ಲಸಿಕೆ ಪಡೆಯುವಾಗ ಮತ್ತು ಈಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಾಗಲೂ ಜನರು ಸರದಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. 12 ವರ್ಷಗಳಲ್ಲಿ ಅವರು ಹಲವು ಒಳ್ಳೆಯ ಕೆಲಸಗಳನ್ನು ಮಾಡಬಹುದಿತ್ತು. ಆದರೆ ಅವರು ಜನರನ್ನು ಸರದಿಯಲ್ಲಿ ನಿಲ್ಲುವಂತೆ ಮಾಡಿದರು ಎಂದು ಟೀಕಿಸಿದರು.
ಈ ವ್ಯಕ್ತಿ ನಮ್ಮ ಹಣದಲ್ಲಿ ವಿಶ್ವದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಒಂದು ವಿಷಯವನ್ನು ಅವರು ಪದೇಪದೆ ಹೇಳುತ್ತಾರೆ—‘ನಾನು ಚಹಾ ಮಾರಿದ್ದೇನೆ, ನಾನು ಚಹಾ ಮಾರಿದ್ದೇನೆ, ನಾನು ಚಹಾ ಮಾರಿದ್ದೇನೆ’ ಎಂದು. ನೀವು ಏಕೆ ಚಹಾ ಮಾರಿದ್ದಿರಿ? ನೀವು ಚಹಾ ಮಾರಬೇಕೆಂದು ನಾವು ಕೇಳಿದ್ದೇವೆಯೇ? ನೀವು ಶಾಲೆಗೆ ಹೋಗಿ, ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಳ್ಳಬಹುದಿತ್ತು. ‘ನಾನು ಬಡ ತಾಯಿಯ ಮಗ’ ಎಂದು ಹೇಳುತ್ತಾರೆ. ಇಂದು ದೇಶದ ಪ್ರತಿಯೊಬ್ಬ ಮಗುವೂ ಬಡ ತಾಯಿಯ ಮಗನಾಗಲು ಕಾರಣ ನೀವೇ ಎಂದು ದೀಪ್ಕೆ ಹೇಳಿದರು.
ದೀಪ್ಕೆ ಅವರಿಗೆ ಬೆಂಬಲ ಸೂಚಿಸಲು ನಟರಾದ ನಾಸಿರುದ್ದೀನ್ ಶಾ ಮತ್ತು ಶಬಾನಾ ಆಜ್ಮಿ, ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ, ನಿರ್ದೇಶಕ ವಿಶಾಲ್ ಭಾರದ್ವಾಜ್ ಹಾಗೂ ಹಾಸ್ಯನಟ ರಾಜೀವ್ ನಿಗಮ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




