ಕಾಲಿವುಡ್ ಗೆ ಚೈತ್ರಾ ಆಚಾರ್ ಎಂಟ್ರಿ: ರಾಜು ಮುರುಗನ್ ನಿರ್ದೇಶನದ ಸಿನಿಮಾದಲ್ಲಿ ಟೋಬಿ ಬೆಡಗಿ!
ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶಶಿಕುಮಾರ್ ಅವರಿಗೆ ಚೈತ್ರಾ ಜೋಡಿಯಾಗಿದ್ದಾರೆ, 135 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನುಭವಿ ತಾರೆಯ ಎದುರು ಅವರ ಚೊಚ್ಚಲ ಸಿನಿಮಾವಾಗಿದೆ.

ಚೈತ್ರಾ ಆಚಾರ್ ಕನ್ನಡ ಚಿತ್ರರಂಗದಲ್ಲಿ ಪರಿಚಿತ ಮುಖವಾಗಿದ್ದಾರೆ. ಗಿಲ್ಕಿ, ಟೋಬಿಯಂತಹ ಅವರ ಪಾತ್ರಗಳಿಗೆ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದಲ್ಲಿನ ಅವರ ಇತ್ತೀಚಿನ ನಟನೆಗಾಗಿ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಚೈತ್ರಾ ಆಚಾರ್ ಇತರ ಭಾಷೆಗಳಿಗೆ ತಮ್ಮ ನಟನಾ ಪರಿಧಿಯನ್ನು ವಿಸ್ತರಿಸುತ್ತಿದ್ದಾರೆ, ಅವರ ತಮಿಳಿನ ಚೊಚ್ಚಲ ಸಿನಿಮಾಗೆ ಸಹಿ ಹಾಕಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಅವರು ಎರಡು ತಮಿಳು ಪ್ರಾಜೆಕ್ಟ್ಗಳಿಗೆ ಸಹಿ ಹಾಕಿದ್ದಾರೆ, ಈಗಾಗಲೇ ಒಂದರ ಶೂಟಿಂಗ್ ನಡೆಯುತ್ತಿದೆ. ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶಶಿಕುಮಾರ್ ಅವರಿಗೆ ಚೈತ್ರಾ ಜೋಡಿಯಾಗಿದ್ದಾರೆ, 135 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನುಭವಿ ತಾರೆಯ ಎದುರು ಅವರ ಚೊಚ್ಚಲ ಸಿನಿಮಾವಾಗಿದೆ.
ಖ್ಯಾತ ಛಾಯಾಗ್ರಾಹಕ ಶಿವಕುಮಾರ್ ಈ ಗ್ರಾಮೀಣ ಕೌಟುಂಬಿಕ ಕಥೆಗೆ ದೃಶ್ಯಗಳನ್ನು ಸಂಯೋಜಿಸುತ್ತಿ್ದಾರೆ, ಪ್ರಸ್ತುತ ಕೋವಿಲ್ಪಟ್ಟಿಯಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಕನ್ನಡಕ್ಕೆ ಸಂಬಂಧಿಸಿದಂತೆ, ಚೈತ್ರ ಆಚಾರ್ ಕೊನೆಯದಾಗಿ ಕಾಣಿಸಿಕೊಂಡಿದ್ದು ಹ್ಯಾಪಿ ಬರ್ತ್ಡೇ ಟು ಮಿ ಸಿನಿಮಾದಲ್ಲಿ, ಇದು ನೇರ OTT ಬಿಡುಗಡೆಯಾಗಿದೆ. ಜೊತೆಗೆ ರೋಹಿತ್ ಪದಕಿಯ ಉತ್ತರಕಾಂಡ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದು ದಿಗಂತ್, ಧನಂಜಯ್ ಮತ್ತು ಐಶ್ವರ್ಯಾ ರಂಗರಾಜನ್ ನಟಿಸಿರುವ ಗ್ಯಾಂಗ್ಸ್ಟರ್ ಕಥೆಯುಳ್ಳ ಸಿನಿಮಾವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



