ಸಿನಿಮಾ ಸುದ್ದಿ

ವಿವಾಹಿತ ನಾಯಕಿಯರಿಗೂ ಈಗ ಉತ್ತಮ ಪಾತ್ರ, ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆ: ಖುಷಿ ರವಿ

'ದಿಯಾ' ಮೂಲಕ ರಾತ್ರೋ ರಾತ್ರಿ ಫೇಮಸ್ ಆಗಿ ಕೆಲವು ದಿನಗಳಿಂದ ಬಿಡುವು ಪಡೆದಿದ್ದ ನಟಿ ಖುಷಿ ರವಿ, ಇದೀಗ ಕೇಸ್ ಆಫ್ ಕೊಂಡಣ್ಣ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮೂರನೇ ಕನ್ನಡ ಚಿತ್ರವಾಗಿದೆ.

ವಿವಾಹಿತ ನಾಯಕಿಯರಿಗೂ ಈಗ ಉತ್ತಮ ಪಾತ್ರ, ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆ: ಖುಷಿ ರವಿ
ಖುಷಿ ರವಿ
Published On :

'ದಿಯಾ' ಮೂಲಕ ರಾತ್ರೋ ರಾತ್ರಿ ಫೇಮಸ್ ಆಗಿ ಕೆಲವು ದಿನಗಳಿಂದ ಬಿಡುವು ಪಡೆದಿದ್ದ ನಟಿ ಖುಷಿ ರವಿ, ಇದೀಗ ಕೇಸ್ ಆಫ್ ಕೊಂಡಣ್ಣ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮೂರನೇ ಕನ್ನಡ ಚಿತ್ರವಾಗಿದೆ.

ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರ ಜೋಡಿಯಾಗಿರುವ ಖುಷಿ ರವಿ, ಮೊದಲ ಬಾರಿಗೆ ತನಿಖಾ ಪ್ರಕಾರದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜನವರಿ 26 ರಂದು ಚಿತ್ರ ತೆರೆಗೆ ಅಪ್ಪಳಿಸುತ್ತಿದ್ದು, ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಅವರು ತಿಳಿಸಿದರು. 

'ದಿಯಾ'ದಲ್ಲಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಮಾಡಿದ್ದೆ. ಆದರೆ 'ಕೇಸ್ ಆಫ್ ಕೊಂಡಣ್ಣ'ದಂತಹ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಭಾವನಾ ಮೆನನ್, ರಂಗಾಯಣ ರಘು ಅವರೊಂದಿಗೆ ಅವಿಭಾಜ್ಯ ಅಂಗವಾಗಿದ್ದು, ತಮ್ಮ ಪಾತ್ರವು ಗಮನಾರ್ಹ ರೀತಿಯ ಪ್ರಾಮುಖ್ಯತೆ ಹೊಂದಿದೆ ಎಂದರು. 

'ಸೋಡಾ ಬುಡ್ಡಿ' ಚಿತ್ರದೊಂದಿಗೆ ಪ್ರಾರಂಭಿಸಿ ದಿಯಾದಲ್ಲಿ ಜನಪ್ರಿಯತೆ ಗಳಿಸಿದ ನಟಿ, ನಾಲ್ಕು ವರ್ಷಗಳ ನಂತರವೂ  ಇನ್ನೂ ಗುರುತಿಸಿಕೊಳ್ಳಲು ಹುಡುಕಾಟ ನಡೆಸುತ್ತಿರುವುದನ್ನು ಒಪ್ಪಿಕೊಳ್ಳುತ್ತಾರೆ. “ನನ್ನ ವಿಷಯದಲ್ಲಿ, ಬಹುಮುಖಿ ಪಾತ್ರಗಳನ್ನು ನಿರ್ವಹಿಸಲು ಮುಕ್ತವಾಗಿದ್ದರೂ ನನ್ನನ್ನು ಅಂತರ್ಮುಖಿ ಎಂದು ಗ್ರಹಿಸುವ ಸವಾಲು ಇದೆ. ಅಂತಹ ಸಂದರ್ಭಗಳಲ್ಲಿ, ನನ್ನ ಕುಶಲತೆ ಪ್ರದರ್ಶಿಸಲು ಮತ್ತು ನನ್ನ ಸಾಮರ್ಥ್ಯದ ಬಗ್ಗೆ ತಪ್ಪು ಕಲ್ಪನೆ ಬದಲಾಯಿಸಲು ಆಡಿಷನ್‌ಗಳ ಪ್ರಾಮುಖ್ಯತೆಯನ್ನು ಹೇಳಬೇಕಾಗುತ್ತದೆ ಎಂದು ಅವರು ವಿವರಿಸಿದರು. 

ರುದ್ರ ಮತ್ತು ಪಿಂಡಮ್‌ನಂತಹ ಚಿತ್ರಗಳೊಂದಿಗೆ ತೆಲುಗು ಚಿತ್ರರಂಗದಲ್ಲಿ ಖುಷಿ ರವಿ ಛಾಪು ಮೂಡಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದ್ದಾರೆ. ಫುಲ್ ಮೀಲ್ಸ್ ಮತ್ತು S/o ಮುತ್ತಣ್ಣನ ನಂತಹ ಪ್ರಾಜೆಕ್ಟ್‌ಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ, ಅವು ನಿರ್ಮಾಣದ ವಿವಿಧ ಹಂತಗಳಲ್ಲಿವೆ.

ನಾಯಕಿಯ ವೃತ್ತಿಜೀವನ ಸೀಮಿತವಾಗಿದೆ ಎಂಬ ಕಲ್ಪನೆಯನ್ನು ಅವರು ಒಪ್ಪುವುದಿಲ್ಲ. ವಿವಾಹಿತ ನಾಯಕಿಯರು ಈಗ ಉತ್ತಮ ಪಾತ್ರ ಸ್ವೀಕರಿಸುತ್ತಿದ್ದು, ಉದ್ಯಮದಲ್ಲಿನ ಸಕಾರಾತ್ಮಕ ಬದಲಾವಣೆಯಾಗಿದೆ ಎನ್ನುವ ಅವರು, "ನಾನು ವೈಯಕ್ತಿಕವಾಗಿ ಈ ಬದಲಾವಣೆಯನ್ನು ಅನುಭವಿಸಿದ್ದೇನೆ, ಮದುವೆಯಾಗಿದ್ದೇನೆ ಮತ್ತು ಇನ್ನೂ ಪ್ರಮುಖ ಪಾತ್ರಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದರು.

ಕೊಂಡಣ್ಣ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರೊಂದಿಗೆ ಜೋಡಿಯಾಗಿರುವಾಗ ಮತ್ತು ಭಾವನಾ ಮತ್ತು ರಂಗಾಯಣ ರಘು ಅವರೊಂದಿಗೆ ನಾನು ಪರದೆಯ ಜಾಗವನ್ನು ಹಂಚಿಕೊಳ್ಳದಿದ್ದರೂ, ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ನಂಬುತ್ತೇನೆ ಎಂದರು. ದೇವಿಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾ ನಿರ್ಮಾಣದ ಈ ಚಿತ್ರಕ್ಕೆ ಗಗನ್ ಬಡೇರಿಯಾ ಅವರ ಸಂಗೀತ, ವಿಶ್ವನಾಥ್ ರಾವ್ ಅವರ ಛಾಯಾಗ್ರಹಣ ಮತ್ತು ಭವಾನಿ ಶಂಕರ್ ಅವರ ಕಲಾ ನಿರ್ದೇಶನವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.