ಅರವಿಂದ್ ಶಾಸ್ತ್ರಿ ನಿರ್ದೇಶನದ 'ಬಿಸಿ-ಬಿಸಿ ಐಸ್-ಕ್ರೀಮ್' ಚಿತ್ರಕ್ಕೆ ಒಂದಾದ ಅರವಿಂದ್ ಐಯ್ಯರ್-ಸಿರಿ ರವಿಕುಮಾರ್
ಮೂಲ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಗೆದ್ದ ಕಹಿ (2016) ಮತ್ತು ಅಳಿದು ಉಳಿದವರು (2019) ನಿರ್ದೇಶನಕ್ಕೆ ಹೆಸರುವಾಸಿಯಾದ ಅರವಿಂದ್ ಶಾಸ್ತ್ರಿ, ಈಗ 'ಬಿಸಿ-ಬಿಸಿ ಐಸ್-ಕ್ರೀಮ್' ಶೀರ್ಷಿಕೆಯ ಕ್ರೈಮ್ ಕಾಮಿಡಿ ಎಂಟರ್‌ಟೈನರ್ ಅನ್ನು ನಿರ್ದೇಶಿಸುತ್ತಿದ್ದಾರೆ.

ಮೂಲ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಗೆದ್ದ ಕಹಿ (2016) ಮತ್ತು ಅಳಿದು ಉಳಿದವರು (2019) ನಿರ್ದೇಶನಕ್ಕೆ ಹೆಸರುವಾಸಿಯಾದ ಅರವಿಂದ್ ಶಾಸ್ತ್ರಿ, ಈಗ 'ಬಿಸಿ-ಬಿಸಿ ಐಸ್-ಕ್ರೀಮ್' ಶೀರ್ಷಿಕೆಯ ಕ್ರೈಮ್ ಕಾಮಿಡಿ ಎಂಟರ್‌ಟೈನರ್ ಅನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಅರವಿಂದ್ ಐಯ್ಯರ್ ಕ್ಯಾಬ್ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿರಿ ರವಿಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಕಥಾಹಂದರವು ಖಿನ್ನತೆಗೆ ಒಳಗಾದ, ಹೃದಯ ಮುರಿದ, ಅತೃಪ್ತ ಪ್ರೇಮಿ ಮತ್ತು ಅನಾರೋಗ್ಯ ಪೀಡಿತ ಕ್ಯಾಬ್ ಡ್ರೈವರ್‌ನ ಜೀವನಕ್ಕೆ ಎಂಟ್ರಿ ಕೊಡುವ ನಿಗೂಢ ಮಹಿಳೆಯನ್ನು ಅನುಸರಿಸುತ್ತದೆ. ಬಳಿಕ ಆತನ ಎಲ್ಲಾ ದುಃಖಗಳು ಕಣ್ಮರೆಯಾಗುತ್ತವೆ ಮತ್ತು ಅನೇಕ ಸಾಹಸಗಳು ಪ್ರಾರಂಭವಾಗುತ್ತವೆ. ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಅರವಿಂದ್ ಶಾಸ್ತ್ರಿ ನಿರ್ದೇಶನ ಮಾತ್ರವಲ್ಲದೆ ಚಿತ್ರಕ್ಕೆ ಕಥೆ ಮತ್ತು ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಬಾಯ್ಲಡ್ ಬೀನ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷರ ಭಾರಧ್ವಾಜ್ 'ಬಿಸಿ-ಬಿಸಿ Ice-Cream' ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಲ್ಲದೆ, ಅವರು ವಸ್ತ್ರ ವಿನ್ಯಾಸಕ್ಕೂ ಕೊಡುಗೆ ನೀಡಿದ್ದಾರೆ.
ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು, ಎನೋಶ್ ಒಲಿವೇರಾ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಶ್ರೇಯಾಂಕ್ ನಂಜಪ್ಪ ಸೌಂಡ್ ಮಿಕ್ಸಿಂಗ್ ಮಾಡಿದ್ದರೆ, ಸುರೇಶ್ ಬಗಲಿ ಧ್ವನಿಮುದ್ರಣವನ್ನು ನೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


