'X & Y' ಸಿನಿಮಾ ಪ್ರೋಮೋ ರಿಲೀಸ್: ಹಾಸ್ಯ ಚಿತ್ರಕ್ಕೆ ಸತ್ಯ ಪ್ರಕಾಶ್ ಆ್ಯಕ್ಷನ್-ಕಟ್
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನ ಗೆದ್ದಿರುವ ನಿರ್ದೇಶಕ ಡಿ ಸತ್ಯ ಪ್ರಕಾಶ್ ಈ ಬಾರಿ ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'X & Y' ಎಂಬ ಟೈಟಲ್ ಇಟ್ಟುಕೊಂಡು ತೆರೆ ಮೇಲೆ ಬರಲು ಮುಂದಾಗಿದ್ದಾರೆ.

ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಹಾಗೂ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಪರಿಚಯವಾದ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನ ಗೆದ್ದಿರುವ ನಿರ್ದೇಶಕ ಡಿ ಸತ್ಯ ಪ್ರಕಾಶ್ ಈ ಬಾರಿ ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'X & Y' ಎಂಬ ಟೈಟಲ್ ಇಟ್ಟುಕೊಂಡು ತೆರೆ ಮೇಲೆ ಬರಲು ಮುಂದಾಗಿದ್ದಾರೆ.
ಈವರೆಗೂ ಸಿನಿಮಾ ನಿರ್ಮಾಣ ಜೊತೆಗೆ ನಿರ್ದೇಶನ ಮಾಡಿದ್ದ ಸತ್ಯ ಪ್ರಕಾಶ್ ಅವರು ಇದೇ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಟನೆಗಿಳಿದಿದ್ದಾರೆ.
ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಈ ನಡುವೆ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ನಿನ್ನೆ X&Y ಸಿನಿಮಾದ ಪ್ರೋಮೋ ಝಲಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಇದು ಇವತ್ತಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಅಪ್ಪ-ಅಮ್ಮ ಆಗುತ್ತಿರುವವರ, ಅಪ್ಪ –ಅಮ್ಮ ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ ಕಥೆ, ಇವತ್ತಿನ ಮಕ್ಕಳ ಕಥೆ. ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು, ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ಅದರಲ್ಲೂ ನಗುನಗುತ್ತಾ ನೋಡುವಂತಹ ಕಥೆಯಾಗಿ ನಿಮ್ಮ ಮುಂದೆ ತರುತ್ತಿದ್ದೇವೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ ಎಂದು ಚಿತ್ರದ ಕುರಿತು ಸತ್ಯ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ವಾಸುಕಿ-ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



