ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಭೇಟಿ ಮಾಡಿದ ಸಂದೇಶ್ ನಾಗರಾಜ್; ಹೊಸ ಚಿತ್ರ ಸಾಧ್ಯತೆ!

ಸದ್ಯ, ಸುದೀಪ್ ಅವರು 'ಮ್ಯಾಕ್ಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಿಚ್ಚ ಸುದೀಪ್ ಅವರಿಗೆ ಪೂರಕವಾಗಿರುವ ಕಥೆಯನ್ನು ಹುಡುಕಬೇಕಾಗಿದೆ ಎಂದು ಸಂದೇಶ್ ನಾಗರಾಜ್ ಹೇಳುತ್ತಾರೆ.

ಕಿಚ್ಚ ಸುದೀಪ್ ಭೇಟಿ ಮಾಡಿದ ಸಂದೇಶ್ ನಾಗರಾಜ್; 
ಹೊಸ ಚಿತ್ರ ಸಾಧ್ಯತೆ!
ಕಿಚ್ಚ ಸುದೀಪ್-ಸಂದೇಶ್ ನಾಗರಾಜ್
Published On :

ನಿರ್ಮಾಪಕ ಸಂದೇಶ್ ನಾಗರಾಜ್ ಹೊಸ ಪ್ರಾಜೆಕ್ಟ್ ನಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಜೊತೆಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಚೆನ್ನೈಯಲ್ಲಿ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಸೆಟ್ ಗೆ ಸಂದೇಶ್ ನಾಗರಾಜ್ ಭೇಟಿ ಮಾಡಿದ್ದು ಊಹಾಪೋಹಕ್ಕೆ ಕಾರಣವಾಗಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ನಿಂತು ತೆಗೆಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಹುಭಾಷೆಯ ಚಿತ್ರಕ್ಕೆ ಕಿಚ್ಚ ಸುದೀಪ್ ಅವರನ್ನು ಕರೆತರಲು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಸುದೀಪ್ ಅವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ, ಪ್ರಸ್ತುತ ಮಾತುಕತೆ ನಡೆಸುತ್ತಿದ್ದೇವೆ, ಶೀಘ್ರದಲ್ಲೇ ಅಂತಿಮವಾಗುವ ಸಾಧ್ಯತೆಯಿದೆ ಎಂದು ಸಂದೇಶ್ ಹೇಳುತ್ತಾರೆ. ಪ್ರಾಜೆಕ್ಟ್ ಕೈಗೂಡಿದರೆ ಇದೇ ಮೊದಲ ಬಾರಿಗೆ ಸಂದೇಶ್ ನಾಗರಾಜ್ ಮತ್ತು ಕಿಚ್ಚ ಸುದೀಪ್ ಜೊತೆಯಾಗಲಿದ್ದಾರೆ.

ಸದ್ಯ, ಸುದೀಪ್ ಅವರು 'ಮ್ಯಾಕ್ಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಿಚ್ಚ ಸುದೀಪ್ ಅವರಿಗೆ ಪೂರಕವಾಗಿರುವ ಕಥೆಯನ್ನು ಹುಡುಕಬೇಕಾಗಿದೆ ಎಂದು ಸಂದೇಶ್ ನಾಗರಾಜ್ ಹೇಳುತ್ತಾರೆ.

ಸಂದೇಶ್ ನಾಗರಾಜ್ ಅವರ ಪ್ರೊಡಕ್ಷನ್ ಹೌಸ್ ಪ್ರಸ್ತುತ ಸೃಜನ್ ಲೋಕೇಶ್ ಅವರ ಚೊಚ್ಚಲ ನಿರ್ದೇಶನದ ಚಿತ್ರ 'ಜಿಎಸ್‌ಟಿ'ಯನ್ನು ಮಾಡುತ್ತಿದೆ. ಜೂನ್‌ನಲ್ಲಿ ಶ್ರೀನಿ ಅವರ 'ಬೀರ್ಬಲ್ 2' ಚಿತ್ರೀಕರಣವನ್ನು ಪ್ರಾರಂಭಿಸಲಿದೆ. ಸುದೀಪ್ ಅವರು ಮ್ಯಾಕ್ಸ್ ಚಿತ್ರದ ನಂತರ ಚೇರನ್ ಅವರ ಪ್ರಾಜೆಕ್ಟ್‌ನ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಈ ಮಧ್ಯೆ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.