ಸಿನಿಮಾ ಸುದ್ದಿ

ಪ್ರಿಯಾಂಕಾ ಮುಂದಿನ ಚಿತ್ರಕ್ಕೆ 'ಕ್ಯಾಪ್ಚರ್' ಟೈಟಲ್ ಫಿಕ್ಸ್: 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್

ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾದ ಶೀರ್ಷಿಕೆ ಲಾಂಚ್‌ ಕೊಂಚ ವಿಭಿನ್ನವಾಗಿ ನೆರವೇರಿದೆ. 60 ಅಡಿಯ ಕಟೌಟ್‌ ನಿರ್ಮಿಸಿ, ಆ ಮೂಲಕ ಚಿತ್ರದ ಫಸ್ಟ್‌ ಲುಕ್‌ ಮತ್ತು ಶೀರ್ಷಿಕೆ ರಿವೀಲ್‌ ಮಾಡಲಾಗಿದೆ.

ಪ್ರಿಯಾಂಕಾ ಮುಂದಿನ ಚಿತ್ರಕ್ಕೆ 'ಕ್ಯಾಪ್ಚರ್' ಟೈಟಲ್ ಫಿಕ್ಸ್: 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್
ಪ್ರಿಯಾಂಕಾ ಉಪೇಂದ್ರ ಕ್ಯಾಪ್ಚರ್‌ ಸಿನಿಮಾ ಟೈಟಲ್‌ ಅನಾವರಣ
Published On :

ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾದ ಶೀರ್ಷಿಕೆ ಲಾಂಚ್‌ ಕೊಂಚ ವಿಭಿನ್ನವಾಗಿ ನೆರವೇರಿದೆ. 60 ಅಡಿಯ ಕಟೌಟ್‌ ನಿರ್ಮಿಸಿ, ಆ ಮೂಲಕ ಚಿತ್ರದ ಫಸ್ಟ್‌ ಲುಕ್‌ ಮತ್ತು ಶೀರ್ಷಿಕೆ ರಿವೀಲ್‌ ಮಾಡಲಾಗಿದೆ.

ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾವಾಗಿದೆ.

ಇತ್ತೀಚೆಗಷ್ಟೇ ಚಿತ್ರ ತಂಡ 60 ಅಡಿ ಎತ್ತರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿತು. ವೀರೇಶ್ ಚಿತ್ರಮಂದಿರದ ಮುಂಭಾಗದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್ ನಿಲ್ಲಿಸುವ ಮೂಲಕ ಸಿನಿಮಾದ ಟೈಟಲ್ ಪೋಸ್ಟರ್'ನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಬಿಡುಗಡೆ ಮಾಡಿದರು.

ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿ ರಾಜ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವು ನಿರ್ಮಾಣ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಸಿನಿಮಾ ಮುಂದಿನ ತಿಂಗಳು ನವೆಂಬರ್‌ನಲ್ಲಿ ರಿಲೀಸ್​ ಆಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.