ನನ್ನ 170ನೇ ಚಿತ್ರವು ಸಾಮಾಜಿಕ ಸಂದೇಶ ಹೊಂದಿರುವ ದೊಡ್ಡ ಎಂಟರ್ಟೈನರ್ ಆಗಿರುತ್ತದೆ: ರಜನಿಕಾಂತ್
ಸಿನಿಮಾ ಐಕಾನ್ ರಜನಿಕಾಂತ್ ಅವರು ತಮ್ಮ 170ನೇ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಇದು ಸಾಮಾಜಿಕ ಸಂದೇಶದೊಂದಿಗೆ ದೊಡ್ಡ ಎಂಟರ್ಟೈನರ್ ಆಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಚೆನ್ನೈ: ಸಿನಿಮಾ ಐಕಾನ್ ರಜನಿಕಾಂತ್ ಅವರು ತಮ್ಮ 170ನೇ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಇದು ಸಾಮಾಜಿಕ ಸಂದೇಶದೊಂದಿಗೆ ದೊಡ್ಡ ಎಂಟರ್ಟೈನರ್ ಆಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ಸದ್ಯ ಇನ್ನೂ ಹೆಸರಿಡದ ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಲಿದೆ. ಮಾರ್ಚ್ನಲ್ಲಿ ಈ ಸಿನಿಮಾವನ್ನು ಘೋಷಿಸಲಾಗಿದ್ದು, ಇದನ್ನು 'ಜೈ ಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.
'ನಾನು ನನ್ನ 170ನೇ ಚಿತ್ರವನ್ನು ನಿರ್ದೇಶಕ ಜ್ಞಾನವೇಲ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಮಾಡುತ್ತಿದ್ದೇನೆ. ಈ ಸಿನಿಮಾ ಸಾಮಾಜಿಕ ಸಂದೇಶದೊಂದಿಗೆ ದೊಡ್ಡ ಎಂಟರ್ಟೈನರ್ ಆಗಿರುತ್ತದೆ' ಎಂದು 72 ವರ್ಷದ ನಟ ತಿರುವನಂತಪುರಕ್ಕೆ ಹೊರಡುವ ಮೊದಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ನಾನು ಈಗ ನನ್ನ 170ನೇ ಚಿತ್ರದ ಚಿತ್ರೀಕರಣಕ್ಕೆ ಹೋಗುತ್ತಿದ್ದೇನೆ. ಚಿತ್ರದ ಶೀರ್ಷಿಕೆಯನ್ನು ಇನ್ನೂ ನಿರ್ಧರಿಸಿಲ್ಲ' ಎಂದು ರಜನಿಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಜೈಲರ್: ರಜನಿಗೆ ಸನ್ ಪಿಕ್ಚರ್ಸ್ ಭಾರಿ ಗಿಫ್ಟ್; 100 ಕೋಟಿ ರೂ. ಚೆಕ್ ವಿತರಣೆ?
ಲೈಕಾ ಪ್ರೊಡಕ್ಷನ್ಸ್ನ ಸುಭಾಸ್ಕರನ್ ನಿರ್ಮಿಸಲಿರುವ ಈ ತಮಿಳು ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ.
ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆಗಸ್ಟ್ನಲ್ಲಿ ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿದೆ.
ಈ ಚಿತ್ರಕ್ಕೆ ಸಿಕ್ಕಿರುವ ವಿಜಯವು ನಿರೀಕ್ಷೆಗೂ ಮೀರಿದ್ದಾಗಿದೆ ಎಂದು ಹಿರಿಯ ನಟ ಹೇಳಿದ್ದರು.
ರಜನಿಕಾಂತ್ ಅವರು ಲೋಕೇಶ್ ಕನಕರಾಜ್ ಅವರ ಇನ್ನೂ ಹೆಸರಿಡದ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರ 'ಲಾಲ್ ಸಲಾಮ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


