ಸಿನಿಮಾ ಸುದ್ದಿ

'ಮುಂದಿನ ಬಾರಿ ಎಲ್ಲಾ ಮುದ್ದು ಅಜ್ಜಿಯರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ': ರಮ್ಯಾ

ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಮೊದಲ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಶೋನ ತುಂಬೆಲ್ಲಾ ಅವರು ಬಹುಪಾಲು ಇಂಗ್ಲಿಷ್ ನಲ್ಲಿಯೇ ಮಾತನಾಡಿದ್ದು ಇದಕ್ಕೆ ಕಾರಣ.

'ಮುಂದಿನ ಬಾರಿ ಎಲ್ಲಾ ಮುದ್ದು ಅಜ್ಜಿಯರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ': ರಮ್ಯಾ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ರಮ್ಯಾ
Published On :

ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಮೊದಲ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಶೋನ ತುಂಬೆಲ್ಲಾ ಅವರು ಬಹುಪಾಲು ಇಂಗ್ಲಿಷ್ ನಲ್ಲಿಯೇ ಮಾತನಾಡಿದ್ದು ಇದಕ್ಕೆ ಕಾರಣ. 

ರಮ್ಯಾ ಮಾತನಾಡಿದ್ದು ಅಜ್ಜ-ಅಜ್ಜಿಯಂದಿರಿಗೆ ಅರ್ಥವಾಗಿಲ್ಲ, ಇದು ಕನ್ನಡದ ಶೋನ ಇಲ್ಲಾ ಇಂಗ್ಲಿಷ್ ಶೋನ ಅರ್ಥವಾಗುತ್ತಿಲ್ಲ ಎಂದೆಲ್ಲ ಜನ ಟ್ರೋಲ್ ಮಾಡಿದ್ದರು.ಅದಕ್ಕೀಗ ನಟಿ ರಮ್ಯಾ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮೀಮ್ ಒಂದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ ಮುಂದಿನ ಬಾರಿ ಎಲ್ಲಾ ಮುದ್ದಿನ ಅಜ್ಜಿಯಂದಿರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕಾರ್ಯಕ್ರಮದ ಅತಿಥಿಗಳು ಬಹುತೇಕರು ಕನ್ನಡಿಗರಾಗಿದ್ದರು. ಅವರಿಗೆ ಅರ್ಥವಾಗಲು, ಎಲ್ಲರನ್ನೂ ಒಳಗೊಳ್ಳಲು ಇಂಗ್ಲಿಷ್ ನಲ್ಲಿ ಮಾತನಾಡಿದೆ ಅಷ್ಟೇ ಎಂದಿದ್ದಾರೆ.

ನಾವೆಲ್ಲರೂ ಪ್ರೀತಿ ಮತ್ತು ದಯೆಯಿಂದ ಭಾಷೆಯನ್ನು ಮಾತನಾಡೋಣ, ಹಂಚೋಣ ಎಂದು ರಮ್ಯಾ ಹೇಳಿದ್ದು, ಅವರ ಪ್ರತಿಕ್ರಿಯೆ ವೈರಲ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.