ಸಿನಿಮಾ ಸುದ್ದಿ

'ಕೆಂಡದ ಸೆರಗು' ಕುಸ್ತಿ ಆಧಾರಿತ ಸಿನಿಮಾದಲ್ಲಿ ಪೊಲೀಸ್ ಕಮಿಷನರ್ ಆಗಿ ಮಾಲಾಶ್ರೀ

ಹಲವಾರು ಚಿತ್ರಗಳಲ್ಲಿ ಸಂಭಾಷಣೆ ಬರಹಗಾರರಾಗಿ ಮತ್ತು ಗೀತರಚನೆಕಾರರಾಗಿ ಕೆಲಸ ಮಾಡಿರುವ ರಾಕಿ ಸೋಮ್ಲಿ, ಕನಸಿನ ರಾಣಿ ಮಾಲಾಶ್ರೀ ಅವರ ಮುಂದಿನ ಚಿತ್ರದ ಮೂಲಕ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡುತ್ತಿದ್ದಾರೆ.

'ಕೆಂಡದ ಸೆರಗು' ಕುಸ್ತಿ ಆಧಾರಿತ ಸಿನಿಮಾದಲ್ಲಿ ಪೊಲೀಸ್ ಕಮಿಷನರ್ ಆಗಿ ಮಾಲಾಶ್ರೀ
ಮಾಲಾಶ್ರೀ
Published On :

ಹಲವಾರು ಚಿತ್ರಗಳಲ್ಲಿ ಸಂಭಾಷಣೆ ಬರಹಗಾರರಾಗಿ ಮತ್ತು ಗೀತರಚನೆಕಾರರಾಗಿ ಕೆಲಸ ಮಾಡಿರುವ ರಾಕಿ ಸೋಮ್ಲಿ, ಕನಸಿನ ರಾಣಿ ಮಾಲಾಶ್ರೀ ಅವರ ಮುಂದಿನ ಚಿತ್ರದ ಮೂಲಕ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡುತ್ತಿದ್ದಾರೆ.

ಕೆಂಡದ ಸೆರಗು ಎಂಬ ಟೈಟಲ್ ಇರುವ ಈ ಚಿತ್ರ ರಾಕಿ ಅವರ ಸ್ವಂತ ಕಾದಂಬರಿ ಆಧರಿಸಿದ ಕತೆಯಾಗಿದೆ. ಕ್ರೀಡೆಯ ಸುತ್ತ ಸುತ್ತುವ ಈ ಚಿತ್ರವು ಕುಸ್ತಿಯೇ  ಹೈಲೈಟ್.  ಮಾಲಾಶ್ರೀ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾದ ಕೆಂಡದ ಸೆರಗು ಚಿತ್ರದಲ್ಲಿ ಭೂಮಿ ಶೆಟ್ಟಿ ಕುಸ್ತಿಪಟುವಾಗಿಯೂ ನಟಿಸಿದ್ದಾರೆ.

ಸಿಂಧು ಲೋಕನಾಥ್ ಅವರು ಲೇಖಕಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಚಿತ್ರದಲ್ಲಿ ಯಶ್ ಶೆಟ್ಟಿ, ವರದನ್, ಶೋಭಿತಾ, ಪ್ರತಿಮಾ, ಬಸು ಹಿರೇಮಠ್ ಮತ್ತು ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೀರೇಶ್ ಖಂಬ್ಳಿ ಅವರ ಸಂಗೀತ ಮತ್ತು ವಿಪಿನ್ ವಿ ರಾಜ್ ಅವರ ಛಾಯಾಗ್ರಹಣವಿದೆ. ಕೆಂಡದ ಸೆರಗು ನಿರ್ಮಾಪಕರು ಇತ್ತೀಚೆಗೆ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಕೆಂಡದ ಸೆರಗು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ, ಮತ್ತು ಚಿತ್ರದ ಟೀಸರ್ ಜನವರಿ 23 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಹೇಳುತ್ತಾರೆ, ತಮ್ಮ ಚಿತ್ರವನ್ನು ಇದೇ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.