ಸಿನಿಮಾ ಸುದ್ದಿ

ತಮಿಳು ನಟ ವಿಕ್ರಮ್ ಅಭಿನಯದ ಹೊಸ ಸಿನಿಮಾ ಘೋಷಣೆ

ಸೂಪರ್‌ಸ್ಟಾರ್ ವಿಕ್ರಮ್ ಅಭಿನಯದ ಹೊಸ ಸಿನಿಮಾ ಘೋಷಣೆಯಾಗಿದೆ. ಅವರ 62 ಚಿತ್ರವನ್ನು ಎಸ್‌ಯು ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ಥಗ್ಸ್ ಮತ್ತು ಮುಂಬೈಕರ್ ಚಿತ್ರಗಳನ್ನು ನಿರ್ಮಿಸಿರುವ ರಿಯಾ ಶಿಬು ಅವರ ಎಚ್‌ಆರ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ತಮಿಳು ನಟ ವಿಕ್ರಮ್ ಅಭಿನಯದ ಹೊಸ ಸಿನಿಮಾ ಘೋಷಣೆ
ವಿಕ್ರಮ್
Published On :

ಸೂಪರ್‌ಸ್ಟಾರ್ ವಿಕ್ರಮ್ ಅಭಿನಯದ ಹೊಸ ಸಿನಿಮಾ ಘೋಷಣೆಯಾಗಿದೆ. ಅವರ 62 ಚಿತ್ರವನ್ನು ಎಸ್‌ಯು ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ಥಗ್ಸ್ ಮತ್ತು ಮುಂಬೈಕರ್ ಚಿತ್ರಗಳನ್ನು ನಿರ್ಮಿಸಿರುವ ರಿಯಾ ಶಿಬು ಅವರ ಎಚ್‌ಆರ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಕ್ರಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆ  ಎಕ್ಸ್‌ನಲ್ಲಿ ಅಧಿಕೃತವಾಗಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು  ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ವಿಕ್ರಮ್ ಅವರು ಇತ್ತೀಚೆಗೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಆಕ್ಷನ್ ಪತ್ತೇದಾರಿ ಚಲನಚಿತ್ರ "ಧ್ರುವ ನಚ್ಚತಿರಂ, ಯುದ್ಧ ಕಾಂಡಂ ಚಾಪ್ಟರ್ 1 ರಲ್ಲಿ ವಿಕ್ರಮ್ ಕಾಣಿಸಿಕೊಂಡಿದ್ದು, ಇದು ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬರಲಿದೆ. ನಿರ್ದೇಶಕ ಪಾ ರಂಜಿತ್ ಅವರೊಂದಿಗೆ ತಂಗಲನ್ ಬಿಡುಗಡೆಗೆ ವಿಕ್ರಮ್ ಕಾಯುತ್ತಿದ್ದಾರೆ. ಈ ಚಿತ್ರ  ಜನವರಿ 26, 2024 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.