ಸಿನಿಮಾ ಸುದ್ದಿ

ತಲೈವರ್-170: 32 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಅಮಿತಾಬ್‌-ರಜನಿ ಕಾಂತ್

ಕಾಲಿವುಡ್​ನ ಸೂಪರ್​ಸ್ಟಾರ್​, ರಜನಿಕಾಂತ್​ ಅಭಿನಯದ ‘ಜೈಲರ್’​ ಆಗಸ್ಟ್​ 10 ರಂದು ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮುಖೇನ ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿತು.

ತಲೈವರ್-170: 32 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಅಮಿತಾಬ್‌-ರಜನಿ ಕಾಂತ್
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್
Published On :

ನವದೆಹಲಿ: ಕಾಲಿವುಡ್​ನ ಸೂಪರ್​ಸ್ಟಾರ್​, ರಜನಿಕಾಂತ್​ ಅಭಿನಯದ ‘ಜೈಲರ್’​ ಆಗಸ್ಟ್​ 10 ರಂದು  ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮುಖೇನ ಬ್ಲಾಕ್​ಬಸ್ಟರ್​ ಸಿನಿಮಾವಾಗಿ ಹೊರಹೊಮ್ಮಿತು. ಸದ್ಯ ಈ ಗೆಲುವಿನ ಬೆನ್ನಲ್ಲೇ ಲೈಕಾ ಪ್ರೊಡಕ್ಷನ್ಸ್​​ ರಜನಿ ಅವರ ಮುಂದಿನ ಚಿತ್ರ ‘ತಲೈವರ್​ 170’ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡಿದೆ.

ಭಾರತೀಯ ಚಿತ್ರರಂಗದ ಪ್ರಮುಖ ನಟರಾದ ಅಮಿತಾಬ್‌ ಬಚ್ಚನ್‌ –ರಜನಿಕಾಂತ್ ಅವರು 32 ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ‘ಹಮ್’, ‘ಗಿರಫ್ತಾರ್’ ಹಾಗೂ ‘ಅಂಧಾ ಕಾನೂನ್’ ಚಿತ್ರಗಳಲ್ಲಿ ಅಮಿತಾಬ್‌ –ರಜನಿ ಜೊತೆಯಾಗಿ ನಟಿಸಿದ್ದರು. ಇದೀಗ ರಜನಿಕಾಂತ್‌ ಅಭಿನಯದ ಹೆಸರಿಡದ ಹೊಸ ಚಿತ್ರ ‘ತಲೈವರ್ 170’ನಲ್ಲಿ ಇವರಿಬ್ಬರು ಮತ್ತೆ ಒಟ್ಟಿಗೆ ಅಭಿನಯಿಸಲಿದ್ದಾರೆ.

ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ನಿರ್ಮಿಸಲಿದ್ದಾರೆ. ಅಮಿತಾಬ್ ಬಚ್ಚನ್ ಅವರು ಈ ಚಿತ್ರಕ್ಕೆ 20 ದಿನಗಳ ಕಾಲ್‌ಶೀಟ್ ನೀಡಿದ್ದು, ಇದಕ್ಕೆ ಅವರು 15 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಉಳಿದಂತೆ ಈ ಚಿತ್ರದಲ್ಲಿ ಮಂಜು ವಾರಿಯರ್ ಮತ್ತು ಫಹಾದ್ ಫಾಸಿಲ್, ತೆಲುಗಿನ ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಕೂಡ ಇರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.