ಸಿನಿಮಾ ಸುದ್ದಿ

ಸ್ನೇಹದ ಮೌಲ್ಯ ಸಾರುವ 'ಕುಚುಕು' ಚಿತ್ರ ಬಿಡುಗಡೆಗೆ ಸಜ್ಜು!

ಸ್ನೇಹದ ಮೌಲ್ಯವನ್ನು ಸಾರುವ ಕುಚುಕು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮೈಸೂರು ರಾಜು ನಿರ್ದೇಶನದ ಈ ಚಿತ್ರವು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಸ್ನೇಹದ ಮೌಲ್ಯ ಸಾರುವ 'ಕುಚುಕು' ಚಿತ್ರ ಬಿಡುಗಡೆಗೆ ಸಜ್ಜು!
ಕುಚುಕು ಸಿನಿಮಾ ಸ್ಟಿಲ್
Published On :

ಸ್ನೇಹದ ಮೌಲ್ಯವನ್ನು ಸಾರುವ ಕುಚುಕು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮೈಸೂರು ರಾಜು ನಿರ್ದೇಶನದ ಈ ಚಿತ್ರವು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇತ್ತೇಚೆಗೆ ನಿರ್ಮಾಪಕರು ಸಿನಿಮಾದ ಟ್ರೈಲರ್ ಮತ್ತು ಹಾಡುಗಳನ್ನು ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್, ಉಮೇಶ್ ಬಣಕಾರ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಿದರು.

ನಾನು 26 ವರ್ಷಗಳಿಂದ ನೃತ್ಯದಲ್ಲಿ ತಲ್ಲೀನನಾಗಿದ್ದೇನೆ, ನೃತ್ಯ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ. ಈ ಹಿಂದೆ ನಾನು ನೃತ್ಯಂ ಶೀರ್ಷಿಕೆಯ ಚಲನಚಿತ್ರವನ್ನು ನಿರ್ದೇಶಿಸಿದ್ದೇನೆ. ಕುಚಿಕು ನನ್ನ ಎರಡನೇ ಸಿನಿಮಾವಾಗಿದೆ.

ಸಿನಿಮಾ ಕಥೆಯ ಗೆಳೆತನದ ಮಹತ್ವವನ್ನು ಒತ್ತಿಹೇಳುತ್ತದೆ, ಸ್ನೇಹದ ಜೊತೆಗೆ ಭಾವನೆಗಳ ಸಮ್ಮಿಳಿತವಾಗಿದೆ. ಮೈಸೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ಮೈಸೂರು ರಾಜು ಹೇಳಿದ್ದಾರೆ.

Story image

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅರ್ಜುನ್ ಚೌಹನ್, ನನ್ನ ಸಿನಿಮಾ ಪ್ರಯಾಣವು ಸಹಾಯಕ ನಿರ್ದೇಶಕನಾಗಿ ಪ್ರಾರಂಭವಾಯಿತು, ಈಗ ನಾನು ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ, ಇದು ನನ್ನ ನಟನೆಯ ಮೂರನೇ ಸಿನಿಮಾವಾಗಿದೆ. ಈ ಚಿತ್ರದಲ್ಲಿ ನಾನು ಸ್ನೇಹಿತನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.

ರಂಗ ಕಲಾವಿದ ಬಸವರಾಜ್‌ಕುಮಾರ್ ಮತ್ತು ಶೇಕ್ ಶಿವಾಜಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ನಾಗರತ್ನಮ್ಮ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಎಟಿ ರವೀಶ್ ಅವರ ಸಂಗೀತವಿದೆ. ಪ್ರಿಯದರ್ಶಿನಿ, ಶಂಕರ್ ಅಶ್ವಥ್, ಬಾಲ ರಾಜವಾಡಿ ಮತ್ತು ಹನುಮಂತೇಗೌಡ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.