ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ 10: ಸೇಫ್ ಆದ್ರೂ ಮನೆಯಿಂದ ಹೊರ ಹೋಗಲು ನಿರ್ಧರಿಸಿದ ವರ್ತೂರ್ ಸಂತೋಷ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 10ನೇ ಆವೃತ್ತಿ ಐದನೇ ವಾರ ಮುಗಿಯುತ್ತಾ ಬಂದಿರುವಂತೆಯೇ ಕುತೂಹಲಕಾರಿ ಪ್ರಸಂಗವೊಂದು ನಡೆದಿದೆ.

ಬಿಗ್ ಬಾಸ್ ಕನ್ನಡ 10: ಸೇಫ್ ಆದ್ರೂ ಮನೆಯಿಂದ ಹೊರ ಹೋಗಲು ನಿರ್ಧರಿಸಿದ ವರ್ತೂರ್ ಸಂತೋಷ್!
ವರ್ತೂರ್ ಸಂತೋಷ್
Published On :

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 10ನೇ ಆವೃತ್ತಿ ಐದನೇ ವಾರ ಮುಗಿಯುತ್ತಾ ಬಂದಿರುವಂತೆಯೇ  ಕುತೂಹಲಕಾರಿ ಪ್ರಸಂಗವೊಂದು ನಡೆದಿದೆ. ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿ ವರ್ತೂರ್ ಸಂತೋಷ್  ಸೇಫ್ ಆಗಿದ್ದರೂ ಮನೆಯಿಂದ ಹೋರ ಹೋಗಲು ನಿರ್ಧರಿಸಿದ್ದಾರೆ. ಅಂದಹಾಗೆ, ಈ ವಾರ ನೀತು ವನಜಾಕ್ಷಿ ಎಲಿಮಿನೇಷನ್ ಆಗಿದ್ದಾರೆ.

ಹೌದು. ಇಂದು ಬಿಡುಗಡೆಯಾದ ಪ್ರೋಮೊದಲ್ಲಿ, 'ಹೊರಗಡೆ ಒಂದು ಘಟನೆ ನಡೆಯಿತು. (ಹುಲಿ ಉಗುರು ಪ್ರಕರಣ) ಆ ಘಟನೆಯನ್ನು ಮರೆತು ಇಲ್ಲಿ ಆಟವಾಡಬೇಕೆಂದುಕೊಂಡರೂ ನನ್ನಿಂದ ಆಗುತ್ತಿಲ್ಲ. ನಾನು ಹೊರಗಡೆನೇ ಇರಬೇಕು ಎಂದು ಇಷ್ಟಪಡುತ್ತೇನೆ' ಎಂದು ಕೈ ಮುಗಿದು  ಕಿಚ್ಚ ಸುದೀಪ್ ಬಳಿ ಕೈ ಮುಗಿದು ಬೇಡಿಕೊಂಡಿದ್ದಾರೆ.

ವರ್ತೂರ್ ಸಂತೋಷ್ ಮಾತಿನಿಂದ ಬೇಸರಗೊಂಡ ಸುದೀಪ್, ನೀವು 34, 15,472 ವೋಟ್ ಗಳನ್ನು ಪಡೆದು ಎಲಿಮಿನೇಷನ್ ನಿಂದ ಪಾರಾಗಿದ್ದು, ನಿಮಗೆ ವೋಟ್ ನೀಡಿದ ಜನರ ವಿರುದ್ಧ ಹೋಗುವುದಕ್ಕೆ ಅಗಲ್ಲ ಎಂದು ಹೇಳಿ ವೇದಿಕೆಯಿಂದ ತೆರಳಿದ್ದಾರೆ. 

ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ವರ್ತೂರ್ ಸಂತೋಷ್ ಗೆ ಸಹ ಸ್ಪರ್ಧಿಗಳು ಒತ್ತಾಯಿಸಿದ್ದಾರೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರಾ? ಅಥವಾ ಮನೆಯಿಂದ ಹೊರ ಹೋಗುತ್ತಾರಾ? ಅಥವಾ ನೀತು ವನಜಾಕ್ಷಿ ಮನೆಯಿಂದ ಹೊರಗೆ ಬರುತ್ತಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.