2024ನೇ ಜನವರಿಯಲ್ಲಿ 'ಚಿ.ತು ಯುವಕರ ಸಂಘ' ಸಿನಿಮಾ ಬಿಡುಗಡೆ!
ಕಮರೊಟ್ಟು ಚೆಕ್ ಪೋಸ್ಟ್ ಮತ್ತು ಒಲವೇ ಮಂದಾರ 2 ಚಿತ್ರದಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಸನತ್, ತಮ್ಮ ಮುಂದಿನ ಪ್ರಾಜೆಕ್ಟ್ ಚಿ.ತು ಯುವಕರ ಸಂಘ ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ. ಶಿವು ರಾಮನಗರ ನಿರ್ದೇಶನದ ಸಿನಿಮಾ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಕಮರೊಟ್ಟು ಚೆಕ್ ಪೋಸ್ಟ್ ಮತ್ತು ಒಲವೇ ಮಂದಾರ 2 ಚಿತ್ರದಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಸನತ್, ತಮ್ಮ ಮುಂದಿನ ಪ್ರಾಜೆಕ್ಟ್ ಚಿ.ತು ಯುವಕರ ಸಂಘ ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ. ಶಿವು ರಾಮನಗರ ನಿರ್ದೇಶನದ ಸಿನಿಮಾ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಈ ಸಿನಿಮಾಗೆ ನಿರ್ದೇಶಕ ಮತ್ತು ನಟ ಪ್ರೇಮ್ ಅವರು ಧ್ವನಿ ನೀಡಿದ್ದಾರೆ. ನಿರುದ್ಯೋಗಿ ಯುವಕರ ಸುತ್ತ ಚಿತ್ರ ಕತೆ ಕೇಂದ್ರೀಕೃತವಾಗಿದೆ. ಪೋಷಕರ ಟೀಕೆಗಳನ್ನು ಸಹಿಸಿಕೊಳ್ಳುವ ಸೋಮಾರಿಗಳ ಕಥೆಯಾಗಿದೆ. ಮನರಂಜನೆಯ ಜೊತೆಗೆ ಸಿನಿಮಾದಲ್ಲಿ ಮಹತ್ವದ ಸಾಮಾಜಿಕ ಸಂದೇಶವಿದೆ ಎಂದು ನಟ ಸನತ್ ಹೇಳಿದ್ದಾರೆ.

ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಚಿ.ತು ಯುವಕರ ಸಂಘದಲ್ಲಿ ಸನತ್ ಗೆ ವರ್ಣಿಕಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ತುಕಾಲಿ ಸಂತು, ಮಹಾಂತೇಶ್, ಬಲರಾಜ ವಾಡಿ, ಬಿರಾದಾರ್ ಸೇರಿದಂತೆ ದೊಡ್ಡ ಪ್ರತಿಭಾವಂತ ತಾರಾಬಳಗ ಈ ಚಿತ್ರದಲ್ಲಿದೆ. ಟೀಸರ್‌ನಲ್ಲಿ ಈ ಎಲ್ಲಾ ಪಾತ್ರಧಾರಿಗಳನ್ನು ನಿರ್ದೇಶಕ ಜೋಗಿ ಪ್ರೇಮ್ ಪರಿಚಯಿಸಿದ್ದಾರೆ. ಜನವರಿ 2024 ರಲ್ಲಿ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


