ಮಣಿರತ್ನಂ-ಕಮಲ್ ಹಾಸನ್ ಜೋಡಿಯ ಹೊಸ ಚಿತ್ರ 'ಥಗ್ ಲೈಫ್' ಟೈಟಲ್ ಬಿಡುಗಡೆ
ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿದ್ದು, ಈ ಜೋಡಿಯ ಬಹು ನಿರೀಕ್ಷಿತ ಹೊಸ ಆಕ್ಷನ್ ಚಿತ್ರಕ್ಕೆ ಥಗ್ ಲೈಫ್ ಎಂದು ಹೆಸರಿಡಲಾಗಿದೆ.

ನವದೆಹಲಿ: ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿದ್ದು, ಈ ಜೋಡಿಯ ಬಹು ನಿರೀಕ್ಷಿತ ಹೊಸ ಆಕ್ಷನ್ ಚಿತ್ರಕ್ಕೆ ಥಗ್ ಲೈಫ್ ಎಂದು ಹೆಸರಿಡಲಾಗಿದೆ.
1987ರ ನಾಯಕನ್ ಚಿತ್ರದ ಬಳಿಕ ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಮಣಿರತ್ನಂ ಒಂದಾಗುತ್ತಿದ್ದಾರೆ. ಅಂದರೆ 33 ವರ್ಷಗಳ ಬಳಿಕ ಇವರಿಬ್ಬರು ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರದ ನಿರ್ಮಾಪಕರಲ್ಲಿಒಬ್ಬರಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಚಿತ್ರದ ಟೈಟಲ್ ಮತ್ತು ಟೀಸರ್ ಅನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಥಗ್ ಲೈಫ್' ಚಿತ್ರದಲ್ಲಿ ಜಯಂ ರವಿ, ದುಲ್ಕರ್ ಸಲ್ಮಾನ್ ಮತ್ತು ನಟಿ ತ್ರಿಶಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಥಗ್ ಲೈಫ್ ಚಿತ್ರವನ್ನು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್, ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಮತ್ತು ರತ್ನಂ ಅವರ ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಲಿವೆ.
ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಕಳೆದ ವರ್ಷ ಈ ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು ಮತ್ತು ಅದಕ್ಕೆ ಕೆಎಚ್ 234 ಎಂಬ ತಾತ್ಕಾಲಿಕ ಶೀರ್ಷಿಕೆಯಿಡಲಾಗಿತ್ತು.
ಈ ಥಗ್ ಲೈಫ್ ಟೈಟಲ್ ಜೊತೆಗೆ ಟೀಸರ್ ಅನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು. ಇದರಲ್ಲಿ ಕಮಲ್ ಹಾಸನ್ ಅವರು ರಂಗರಾಯ ಶಕ್ತಿವೇಲು ನೈಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


