ಸಿನಿಮಾ ಸುದ್ದಿ

ಬೆಂಗಳೂರು: ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ; ಚಾಲೆಂಜಿಂಗ್ ಸ್ಟಾರ್ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ ಐಆರ್!

ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್‌ ದಾಖಲಾಗಿದೆ. ದರ್ಶನ್ ಮನೆಯ ಸಾಕು ನಾಯಿಗಳು ಮಹಿಳೆಯೋರ್ವರ ಮೇಲೆ ದಾಳಿ ನಡೆಸಿ ಘಾಸಿಗೊಳಿಸಿರುವ ಹಿನ್ನೆಲೆ ದರ್ಶನ್ ವಿರುದ್ಧ ಎಫ್.ಐ.ಆರ್‌ ದಾಖಲಾಗಿದೆ.

ಬೆಂಗಳೂರು: ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ; ಚಾಲೆಂಜಿಂಗ್ ಸ್ಟಾರ್ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ ಐಆರ್!
ದರ್ಶನ್
Published On :

ಬೆಂಗಳೂರು: ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್‌ ದಾಖಲಾಗಿದೆ. ದರ್ಶನ್ ಮನೆಯ  ಸಾಕು ನಾಯಿಗಳು ಮಹಿಳೆಯೋರ್ವರ ಮೇಲೆ ದಾಳಿ ನಡೆಸಿ ಘಾಸಿಗೊಳಿಸಿರುವ ಹಿನ್ನೆಲೆ ದರ್ಶನ್ ವಿರುದ್ಧ ಎಫ್.ಐ.ಆರ್‌ ದಾಖಲಾಗಿದೆ.

ಆರ್​ಆರ್ ನಗರದ ನಿವಾಸದ ಬಳಿ ಘಟನೆ ನಡೆದಿದೆ, ವೈದ್ಯೆ ಅಮಿತಾ ಜಿಂದಾಲ್ ಎಂಬುವರರು ಆರ್ ಆರ್‌ನಗರ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ. ಇದೇ ತಿಂಗಳ 28 ರಂದು ದೂರುದಾರ ಅಮಿತಾ ಖಾಸಗಿ ಆಸ್ಪತ್ರೆಯ ಕಾರ್ಯಕ್ರಮದ ನಿಮಿತ್ತ ದರ್ಶನ್ ಮನೆ ಬಳಿ ತೆರಳಿದ್ದರು. ಇದೇ ವೇಳೆ ತಮ್ಮ ಕಾರನ್ನು ದರ್ಶನ್ ಮನೆ ಬಳಿ ಪಾರ್ಕಿಂಗ್ ಮಾಡಿದ್ದರು.ಕಾರ್ಯಕ್ರಮ ಮುಗಿಸಿ ಕಾರು ವಾಪಸ್ ತೆಗೆದುಕೊಳ್ಶಲು ಹೋದಾಗ ದರ್ಶನ್ ಮನೆಯ ಸಾಕು ನಾಯಿ ನೋಡಿಕೊಳ್ಳುತ್ತಿದ್ದ ಮನೆ ಕೆಲಸದವರು ಬೇಕಂತಲೇ ಪಾರ್ಕಿಂಗ್ ವಿಚಾರಕ್ಕೆ ವೈದ್ಯರ ಬಳಿ ಕಿರಿಕ್‌ ತೆಗೆದಿದ್ದಾರೆ ಎನ್ನಲಾಗಿದೆ.

ಕಾರು ತೆಗೆದುಳಕೊಳ್ಳಬೇಕು ನಾಯಿಯನ್ನ ಬೇರೆಡೆ ಕರೆದುಕೊಂಡು ಹೋಗುವಂತೆ ಹೇಳಿದ್ದರಂತೆ. ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆಯುವ ವೇಳೆ ಎರಡು ನಾಯಿ ವೈದ್ಯೆಯ ಮೇಲೆ ಜಿಗಿದು ಕಚ್ಚಿರುವ ಆರೋಪ ಕೇಳಿ ಬಂದಿದೆ. ಅಮಿತಾ ಅವರ ಬಟ್ಟೆ ಹರಿದಿದ್ದು ನಾಯಿ ಅವರ ಹೊಟ್ಟೆಯ ಭಾಗಕ್ಕೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಎರಡನೇ ಆರೋಪಿಯಾಗಿ ದರ್ಶನ್ ವಿರುದ್ದ ವೈದ್ಯರು ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.