ಕನ್ನಡ ವೆಬ್ ಸರಣಿ 'ಲವ್ ಯು ಅಭಿ'ಯಲ್ಲಿ ವಿಕ್ರಮ್ ರವಿಚಂದ್ರನ್, ನಟಿ ಅದಿತಿ ಪ್ರಭುದೇವ
ಕನ್ನಡದ ಪಾಲಿಗೆ ವೆಬ್ ಸೀರೀಸ್ಗಳು ಇನ್ನು ಅಷ್ಟಾಗಿ ಪ್ರಚಲಿತಗೊಂಡಿಲ್ಲ. ಆದರೆ, ಇತ್ತೀಚೆಗೆ ತಾಲೆಗಳು ತಮ್ಮನ್ನು ತಾವು ವೆಬ್ ಸೀರೀಸ್ಗಳತ್ತ ತೆರೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ವೆಬ್ ಸೀರೀಸ್ಗಳು ಕಡಿಮೆ ಇದ್ದವು ಮತ್ತು ಈಗ ಪರಿಸ್ಥಿತಿ ಸುಧಾರಿಸುತ್ತಿದೆ.

ಕನ್ನಡದ ಪಾಲಿಗೆ ವೆಬ್ ಸರಣಿಗಳು ಇನ್ನು ಅಷ್ಟಾಗಿ ಪ್ರಚಲಿತಗೊಂಡಿಲ್ಲ. ಆದರೆ, ಇತ್ತೀಚೆಗೆ ತಾಲೆಗಳು ತಮ್ಮನ್ನು ತಾವು ವೆಬ್ ಸೀರೀಸ್ಗಳತ್ತ ತೆರೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ವೆಬ್ ಸಿರೀಸ್ಗಳು ಕಡಿಮೆ ಇದ್ದವು ಮತ್ತು ಈಗ ಪರಿಸ್ಥಿತಿ ಸುಧಾರಿಸುತ್ತಿದೆ.
ಮನರಂಜನಾ ಉದ್ಯಮದಲ್ಲಿ ಚಾಲನಾ ಶಕ್ತಿಯಾಗಿರುವ ಜಿಯೋ ಸಿನಿಮಾ, 'ಲವ್ ಯು ಅಭಿ' ಮೂಲಕ ಕನ್ನಡ ವೆಬ್ ಸಿರೀಸ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಈ ಸರಣಿಯಲ್ಲಿ ನಟ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಮತ್ತು ನಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಮೇ 19 ರಿಂದ ಈ ಸಿರೀಸ್ ಜಿಯೋ ಸಿನಿಮಾ ಅಪ್ಲಿಕೇಷನ್ನಲ್ಲಿ ಪ್ರಸಾರವಾಗುತ್ತಿದೆ. ಇದು ಏಳು ಎಪಿಸೋಡ್ಗಳನ್ನು ಹೊಂದಿದೆ.
ಕಾಳಿ ವೇಲಾಯುಧಂ ನಿರ್ಮಿಸಿ ನಿರ್ದೇಶಿಸಿರುವ ಲವ್ ಯು ಅಭಿ ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದೆ ಮತ್ತು ಶಿವನ ಪಾತ್ರದಲ್ಲಿ ವಿಕ್ರಮ್ ಮತ್ತು ಅಭಿ ಪಾತ್ರದಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ.
ಈ ಸರಣಿಯು ಅನುಭವಿ ಕಲಾವಿದರಾದ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮಾ, ಶ್ರೀನಾಥ್, ಅಂಬಿಕಾ ಮತ್ತು ಶ್ರೀನಿವಾಸ ಮೂರ್ತಿ ಅವರ ಜೊತೆಗೆ ಉತ್ಸಾಹಿ ಹೊಸ ನಟರನ್ನು ಸಹ ಹೊಂದಿದೆ. ಅರುಣ್ ಬ್ರಹ್ಮ ಛಾಯಾಗ್ರಹಣ, ಪ್ರದೀಪ್ ರಾಘವ್ ಸಂಕಲನ ಮತ್ತು ನಿಝಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


