'ಮೋಸ್ಟ್ ವೈಲೆಂಟ್ ಮ್ಯಾನ್' 'ಸಲಾರ್' ಗೆ 100 ದಿನಗಳ ಕೌಂಟ್ ಡೌನ್ ಶುರು: ಹೊಂಬಾಳೆ ಪೋಸ್ಟರ್ ನಲ್ಲಿ ಕೆಜಿಎಫ್ 2 ಕನೆಕ್ಷನ್!!
ಆದಿಪುರುಷ್ ಚಿತ್ರದ ಮಿಶ್ರ ಪ್ರತಿಕ್ರಿಯೆಯಿಂದ ಕಂಗೆಟ್ಟಿರುವ ನಟ ಪ್ರಭಾಸ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದಿದ್ದು, ಪ್ರಶಾಂತ್ ನೀಲ್ ನಿರ್ದೇಶನ ದ ಸಲಾರ್ ಚಿತ್ರದ ಬಿಡುಗಡೆಗೆ 100 ದಿನಗಳ ಕೌಂಟ್ ಡೌನ್ ಆರಂಭವಾಗಿದೆ.

ಬೆಂಗಳೂರು: ಆದಿಪುರುಷ್ ಚಿತ್ರದ ಮಿಶ್ರ ಪ್ರತಿಕ್ರಿಯೆಯಿಂದ ಕಂಗೆಟ್ಟಿರುವ ನಟ ಪ್ರಭಾಸ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದಿದ್ದು, ಪ್ರಶಾಂತ್ ನೀಲ್ ನಿರ್ದೇಶನ ದ ಸಲಾರ್ ಚಿತ್ರದ ಬಿಡುಗಡೆಗೆ 100 ದಿನಗಳ ಕೌಂಟ್ ಡೌನ್ ಆರಂಭವಾಗಿದೆ.
ಹೌದು.. 'ಮೋಸ್ಟ್ ವೈಲೆಂಟ್ ಮ್ಯಾನ್' ಎಂದೇ ಹೇಳಲಾಗುತ್ತಿರುವ ಸಲಾರ್ ಚಿತ್ರದ ಕುರಿತು ಅದರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಸ ಅಪ್ಡೇಟ್ ನೀಡಿದ್ದು, ಚಿತ್ರ ಬಿಡುಗಡೆಗೆ 100 ದಿನಗಳ ಕೌಂಟ್ ಡೌನ್ ಆರಂಭಿಸಿದೆ. ಈ ಕುರಿತು ಚಿತ್ರ ತಂಡ ನೂತನ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಸಾಕಷ್ಚು ಕುತೂಹಲ ಕೆರಳಿಸಿದೆ. ಇದೇ ಪೋಸ್ಟರ್ ನಲ್ಲಿ ಕೆಜಿಎಫ್-2 ಚಿತ್ರದ ಕನೆಕ್ಷನ್ ಕುರಿತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸ ತೊಡಗಿದ್ದಾರೆ.
'ಸಲಾರ್' ಚಿತ್ರದಲ್ಲಿ ಪ್ರಭಾಸ್ ಫುಲ್ ಮಾಸ್ ಆಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲೂ ಸಿನಿಮಾದ ಸೆಟ್‌ನ ಫೋಟೋಗಳು, ಚಿತ್ರದ ಪೋಸ್ಟರ್ಗಳು ಹೈಪ್ ಸೃಷ್ಟಿ ಮಾಡಿದ್ದವು. ಈಗ ನಿರ್ಮಾಪಕರು ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸೆಪ್ಟೆಂಬರ್ 28ರಂದು 'ಸಲಾರ್' ತೆರೆಗೆ ಬರಲಿದೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. 'ಈ ಸಿನಿಮಾ ಥಿಯೇಟರ್‌ಗೆ ಬರಲು 100 ದಿನ ಬಾಕಿ' ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. 'ಕೆಜಿಎಫ್ 2' ಚಿತ್ರದ ಕನೆಕ್ಷನ್ ಮತ್ತೊಮ್ಮೆ ನೆನಪಿಗೆ ಬಂದಿದೆ.
ಸಲಾರ್ ಸಿನಿಮಾ ಥಿಯೇಟರ್‌ಗೆ ಬರಲು 100 ದಿನ ಬಾಕಿ' ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಮೂಲಕ 'ಕೆಜಿಎಫ್ 2' ಚಿತ್ರದ ಕನೆಕ್ಷನ್ ಮತ್ತೊಮ್ಮೆ ನೆನಪಿಗೆ ಬಂದಿದೆ. ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಅನೇಕರು 'ಕೆಜಿಎಫ್ 2' ಚಿತ್ರಕ್ಕೆ ಇರುವ ಕನೆಕ್ಷನ್ ಪತ್ತೆ ಹಚ್ಚಿದ್ದಾರೆ.
'ಸಲಾರ್' ಟೀಂ ಬಿಡುಗಡೆ ಮಾಡಿದ ಇತ್ತೀಚಿನ ಪೋಸ್ಟರ್‌ನಲ್ಲಿ ಕೆಲವು ಬಾಕ್ಸ್‌ಗಳು ಕಂಡುಬಂದಿದೆ. ಸ್ಕ್ರೀನ್ನ ಬ್ರೈಟ್ನೆಸ್ ಹೆಚ್ಚು ಮಾಡಿದರೆ 'Days to..' ಎಂದು ಬರೆದ ಸಾಲುಗಳ ಕೆಳ ಭಾಗದಲ್ಲಿ ಈ ಪೆಟ್ಟಿಗೆಗಳು ಗೋಚರಿಸುತ್ತವೆ. 'ಕೆಜಿಎಫ್ 2' ರಾಕಿ ಭಾಯ್ ಸಾಗರಕ್ಕೆ ಎಸೆದ ಚಿನ್ನದ ಪೆಟ್ಟಿಗೆಗಳು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 'ಸಲಾರ್' ಹಾಗೂ 'ಕೆಜಿಎಫ್' ಚಿತ್ರಗಳು ಪ್ರಶಾಂತ್ ನೀಲ್ ಯೂನಿವರ್ಸ್ನ ಅಡಿಯಲ್ಲಿ ಬರುತ್ತವೆ ಎಂಬುದು ಕೆಲವರ ಊಹೆ. ಈ ಕಾರಣಕ್ಕೆ ಎರಡೂ ಚಿತ್ರಕ್ಕೂ ಲಿಂಕ್ ಕೊಡಲಾಗಿದೆ. ಸಿನಿಮಾ ರಿಲೀಸ್ ಆದ ಬಳಿಕವೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
'ಬಾಹುಬಲಿ 2' (Bahubali 2) ನಂತರ ಪ್ರಭಾಸ್ ನಟಿಸಿದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿವೆ. 'ಸಾಹೋ' ಮತ್ತು 'ರಾಧೆ ಶ್ಯಾಮ್' ಚಿತ್ರಗಳು ಈಗಾಗಲೇ ಅಭಿಮಾನಿಗಳನ್ನು ನಿರಾಸೆಗೊಳಿಸಿವೆ. ಇತ್ತೀಚೆಗೆ ಬಿಡುಗಡೆಯಾದ 'ಆದಿಪುರುಷ್' ಚಿತ್ರ (Adipurush Movie) ಟೀಕೆಗಳನ್ನು ಎದುರಿಸುತ್ತಿದೆ. ನಿರ್ದೇಶಕ ಓಂ ರಾವತ್ ಮಾಡಿದ ತಪ್ಪಿನಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ಕಾರಣಕ್ಕೆ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ 'ಕೆಜಿಎಫ್ 2' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


