ಬೆಂಗಳೂರು: ಕುಡಿದು ಬಾರ್ನಲ್ಲಿ ಕಿರಿಕ್; ಕಿರುತೆರೆ ನಟನ ವಿರುದ್ಧ ಎಫ್ಐಆರ್ ದಾಖಲು
ಕಿರುತೆರೆ ನಟನೊಬ್ಬ ಬಾರ್ನಲ್ಲಿ ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡು ಕಿರಿಕ್ ಮಾಡಿದ್ದಾರೆ. ಇವರ ವಿರುದ್ಧ ಈಗ ಬೆಂಗಳೂರಿನ ಆರ್ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಕಿರುತೆರೆ ನಟನೊಬ್ಬ ಬಾರ್ನಲ್ಲಿ ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡು ಕಿರಿಕ್ ಮಾಡಿದ್ದಾರೆ. ಇವರ ವಿರುದ್ಧ ಈಗ ಬೆಂಗಳೂರಿನ ಆರ್ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ಎಂಬ ನಟನ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತ ವರ್ಷಿಣಿಯಲ್ಲಿ ಅಭಿನಯಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ-ತಂಗಿ ಧಾರಾವಾಹಿಯಲ್ಲಿ ಇವರು ಇಂದ್ರನ ಪಾತ್ರ ನಿರ್ವಹಿಸುತ್ತಿದ್ದಾರೆ.
ಆರ್ಆರ್ ನಗರದ ‘ಅಮೃತ ಬಾರ್ ಆ್ಯಂಡ್ ರೆಸ್ಟೋರೆಂಟ್’ನಲ್ಲಿ ಈ ಗಲಾಟೆ ನಡೆದಿದೆ. ಪ್ರಜ್ವಲ್ ತಮ್ಮ ಸ್ನೇಹಿತರ ಜೊತೆ ಅಮೃತ ಬಾರ್ಗೆ ಹೋಗಿದ್ದರು. ಇದೇ ಬಾರ್ಗೆ ಚೇತನ್ ಕೂಡ ತನ್ನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಪ್ರಜ್ವಲ್ನ ಸ್ನೇಹಿತ ಮನು ಎಂಬುವವರನ್ನು ಚೇತನ್ ಕರೆದಿದ್ದಾರೆ. ಇದರಿಂದ ಅಲ್ಲಿಯೇ ಇದ್ದ ಪ್ರಜ್ವಲ್ ಅವರು ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ. ಚೇತನ್ ನೀಡಿದ ದೂರನ್ನು ಆಧರಿಸಿ, ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮರದ ಪೀಸ್ನಿಂದ ಚೇತನ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದ ಆರೋಪವನ್ನು ಚೇತನ್ ಮಾಡಿದ್ದಾರೆ. ಬಾರ್ನಲ್ಲಿ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಈ ಗುಂಪು ಮತ್ತೆ ಗಲಾಟೆ ಮಾಡಿಕೊಂಡಿದೆ. ಅಮೃತ ಬಾರ್ನಲ್ಲಿ ಗಲಾಟೆ ಆದ ಬಳಿಕ ಚೇತನ್ ಸ್ನೇಹಿತರ ಮೇಲೆ ಪ್ರಜ್ವಲ್ ಮತ್ತೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ದೂರು ದಾಖಲಾಗಿದೆ.
ಸದ್ಯ ಚೇತನ್ ಕೊಟ್ಟು ದೂರಿನನ್ವಯ ಎಫ್ಐಆರ್ ದಾಖಲು ಮಾಡಿಕೊಂಡು ಪೊಲೀಸರು ನೊಟೀಸ್ ನೀಡಿದ್ದಾರೆ. ಇದರ ಜೊತೆಗೆ ಬಾರ್ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


