ಕೊಡಗಿನ ಬೆಡಗಿಗೆ ಭಾರೀ ವಂಚನೆ: ನಟಿ ರಶ್ಮಿಕಾ ಮಂದಣ್ಣ ಮ್ಯಾನೇಜರ್ ಕಿಕ್ ಔಟ್!
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣಗೆ ಲಕ್ಷಾಂತರ ರೂಪಾಯಿಯ ವಂಚನೆಯಾಗಿದೆ ಎನ್ನುವುದರ ಬಗ್ಗೆ ಸುದ್ದಿಯಾಗಿದೆ. ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ.

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣಗೆ ಲಕ್ಷಾಂತರ ರೂಪಾಯಿಯ ವಂಚನೆಯಾಗಿದೆ ಎನ್ನುವುದರ ಬಗ್ಗೆ ಸುದ್ದಿಯಾಗಿದೆ. ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನದ ಆರಂಭದಿಂದಲೇ ಈ ವ್ಯಕ್ತಿಯು ಮ್ಯಾನೇಜರ್ ಆಗಿ ನೇಮಕಗೊಂಡಿದ್ದರು. ರಶ್ಮಿಕಾ ಮಂದಣ್ಣ ಅವರ ಎಲ್ಲ ಹಣಕಾಸಿನ ವ್ಯವಹಾರವನ್ನು ಈ ವ್ಯಕ್ತಿಯೇ ನಿಭಾಯಿಸುತ್ತಿದ್ದರು.
ಆದರೆ ರಶ್ಮಿಕಾಗೇ ಗೊತ್ತಿಲ್ಲದಂತೆ ಸುಮಾರು 80 ಲಕ್ಷ ರೂಪಾಯಿಗಳಷ್ಟು ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಮ್ಯಾನೇಜರ್ ಮೇಲೆ ಕೇಳಿಬಂದಿದೆ. ಇದು ಗೊತ್ತಾಗುತ್ತಿದ್ದಂತೆಯೇ, ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ಆದರೆ ಈ ಮ್ಯಾನೇಜರ್ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.
ಇಷ್ಟೊಂದು ದೊಡ್ಡ ಮೊತ್ತದ ವಂಚನೆ ಆಗಿದ್ದರೂ ಕೂಡ ರಶ್ಮಿಕಾ ಈ ಪ್ರಕರಣವನ್ನು ಸೈಲೆಂಟ್ ಆಗಿ ಹ್ಯಾಂಡಲ್ ಮಾಡಿದ್ದಾರೆ. ಯಾವುದೇ ಸೀನ್ ಕ್ರಿಯೆಟ್ ಮಾಡದೇ, ಮ್ಯಾನೇಜರ್ ಹುದ್ದೆಯಿಂದ ಆತನನ್ನು ಕಿತ್ತೆಸೆದಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


